ಸುದ್ದಿ ಸಂಕ್ಷಿಪ್ತ

ವಸತಿ ನಿಲಯ: ಅರ್ಜಿ ಆಹ್ವಾನ

ಮೈಸೂರು, ಮೇ.29:-  ಮೈಸೂರು ಜಿಲ್ಲೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.
ಆರ್.ಎಸ್. ನಾಯ್ಡುನಗರ,  ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ವಿದ್ಯಾರಣ್ಯಪುರಂ, ನಂಜನಗೂಡು ಟೌನ್, ತಿ.ನರಸೀಪುರ ತಾಲೂಕಿನ ಹೆಳವರಹುಂಡಿ ಹಾಗೂ ವಿದ್ಯಾನಗರ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ, ಆರ್.ಎಸ್. ನಾಯ್ಡುನಗರ ಅಲ್ಪಸಂಖ್ಯಾತರ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲೆ, ಮೈಸೂರುರವರ ಕಛೇರಿ  # 446, ಎಸ್.ಕೆ.ಎರ್. ವಿದ್ಯಾಸಂಸ್ಥೆ, ಸರಸ್ವತಿ ನಿಲಯ, ಕೆಂಪನಂಜಾಂಭ ಆಗ್ರಹಾರ, ಕೆ.ಆರ್. ಮೊಹಲ್ಲಾ, ಮೈಸೂರು-  570024 ಇಲ್ಲಿ ಅಥವಾ ಸಂಬಂಧಿಸಿದ ವಸತಿ ನಿಲಯಗಳಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜುಲೈ 10 ರೊಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೈಸೂರು ಇವರ ಕಛೇರಿಯ ವೇಳೆಯಲ್ಲಿ ಅಥವಾ ದೂರವಾಣಿ ಸಂಖ್ಯೆ: 0821-2422088 ನ್ನು ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: