ಕರ್ನಾಟಕ

ವಿಶೇಷ ಚೇತನರ ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ ಆಹ್ವಾನ

ಮಂಡ್ಯ (ಮೇ 28): ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಶಿಕ್ಷಣ ಸಂಸ್ಥೆ ವತಿಯಿಂದ 2018-19ನೇ ಸಾಲಿಗೆ ಮೂರು ವರ್ಷಗಳ ಅವಧಿಯ ಆರ್ಕಿಟೆಕ್ಟರ್, ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್ ಫಾರ್ ದಿ ವಿಷ್ಯುಯಲಿ ಇಂಪೇರ್ಡ್ ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕಗಳೊಂದಿಗೆ ತೇರ್ಗಡೆ ಹಾಗೂ ಅಂಗವೈಕಲ್ಯತೆಯ ಲಕ್ಷಣಗಳನ್ನು ಹೊಂದಿರಬೇಕು. ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ ಕೋರ್ಸಿಗೆ ಸಾಮಾನ್ಯ ಅಭ್ಯರ್ಥಿಗಳು ಜೆಎಸ್‍ಎಸ್ ಮಹಾವಿದ್ಯಾಪೀಠದ ಯೋಜನೆಯಡಿಯಲ್ಲಿ ಪ್ರವೇಶ ಪಡೆಯಬಹುದು.

ಭಾಗಶಃ ಮತ್ತು ಪೂರ್ಣ ಅಂಧತ್ವವುಳ್ಳ ಅಭ್ಯರ್ಥಿಗಳು ಇಂಗ್ಲೀಷ್ ಬ್ರೈಲ್ ಭಾಷೆಯ ಜ್ಞಾನ ಹೊಂದಿದ್ದಲ್ಲಿ ಆದ್ಯತೆಯನ್ನು ನೀಡಲಾಗುವುದು. ಪಾಲಿಟೆಕ್ನಿಕ್‍ನ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ ವಿಳಾಸ: www.jsspda.org ಅಥವಾ ಪ್ರಾಂಸುಪಾಲರು, ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್, ಮೈಸೂರು ಇವರನ್ನು ಸಂಪರ್ಕಿಸಬಹುದು. (ಎನ್.ಬಿ)

Leave a Reply

comments

Related Articles

error: