
ಮೈಸೂರು
ಕಾಂಗರೂ ಸಾವು
ಮೈಸೂರು ಮೃಗಾಲಯದಲ್ಲಿ ಅನಾರೋಗ್ಯ ಹಾಗೂ ವಯೋಸಹಜ ಸಮಸ್ಯೆಗಳಿಂದ ಮತ್ತೆರಡು ಪ್ರಾಣಿಗಳು ಮೃತಪಟ್ಟಿವೆ.
ಕಾಳಿಂಗ ಸರ್ಪ ಹಾಗೂ ಗಿಡ್ಡ ಜಾತಿಯ ಕಾಂಗರೂ ಮೃತಪಟ್ಟ ಪ್ರಾಣಿಗಳು. ಇದರೊಂದಿಗೆ ಕಳೆದೊಂದು ತಿಂಗಳಿನಲ್ಲಿ ಸಾವನ್ನಪ್ಪಿದ ಪ್ರಾಣಿಗಳ ಸಂಖ್ಯೆ 6ಕ್ಕೇರಿದೆ.
ಕಳೆದ ಮೂರೂವರೆ ತಿಂಗಳಿನಿಂದ ಎಂಟೂವರೆ ವರ್ಷದ ಕಾಳಿಂಗ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಯಕೃತ್ ಅಂಗದ ವೈಫಲ್ಯದಿಂದ ಸಾವನ್ನಪ್ಪಿದೆ. ಅನಾರೋಗ್ಯದ ಕಾರಣ ಏಳುತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿದ್ದರೂ ಏಳೂವರೆ ವರ್ಷದ ಗಿಡ್ಡ ಜಾತಿಯ ಹೆಣ್ಣು ಕಾಂಗರೂ ಸೋಮವಾರ ಮೃತಪಟ್ಟಿದೆ. ಕೆಲದಿನಗಳ ಹಿಂದಷ್ಟೇ ಜೀಬ್ರಾ, ಕಾಡೆಮ್ಮೆ, ಕಾಳಿಂಗ ಸರ್ಪ, ಸಿಂಗಳೀಕ ಮೃತ ಪಟ್ಟಿದ್ದವು. ಪ್ರಾಣಿಗಳ ಸಾವಿಗೆ ಬಲಹೀನತೆ ಹಾಗೂ ಅನಾರೋಗ್ಯ ಕಾರಣ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್ ತಿಳಿಸಿದ್ದಾರೆ.