ದೇಶಪ್ರಮುಖ ಸುದ್ದಿ

ನಾಳೆ, ನಾಡಿದ್ದು ಬ್ಯಾಂಕ್ ಸಿಬ್ಬಂದಿ ಮುಷ್ಕರ ; ತರ್ತು ವ್ಯವಹಾರವಿದ್ದರೆ ಇಂದೇ ಮುಗಿಸಿ!

ಬೆಂಗಳೂರು (ಮೇ 29): ವೇತನ ಪರಿಷ್ಕರಣೆ ಮಾಡಬೇಕು ಎಂಬುದೂ ಸೇರಿದಂತೆ ಇತರ ಬೇಡಿಕೆಗೆ ಆಗ್ರಹಿಸಿ ಇದೇ ತಿಂಗಳು 30, 31 ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಕರೆ ಕೊಟ್ಟಿದೆ.

9 ಯೂನಿಯನ್’ಗಳು ಸೇರಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಇದೇ ತಿಂಗಳ 30, 31 ರಂದು ಬೆಳಗ್ಗೆ 10.30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್’ನಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಆಯಾ ಜಿಲ್ಲೆ, ರಾಜ್ಯದಲ್ಲಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ.

ಇನ್ನು ನಾಳೆ, ಹಾಗೂ ನಾಡಿದ್ದು ಬ್ಯಾಂಕ್ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಬಹುತೇಕ ಬ್ಯಾಂಕ್ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ಈ ಹಿನ್ನಲೆಯಲ್ಲಿ ಚೆಕ್‌ ಕ್ಲಿಯರೆನ್ಸ್‌, ನಗದು-ಜಮೆ ಸೇರಿದಂತೆ ಬ್ಯಾಂಕಿಂಗ್‌ ವ್ಯವಹಾರಗಳಿಗೆ ಅಡಚಣೆಯಾಗಬಹುದು.

ಎಟಿಎಂಗಳಿಗೆ ಹಣ ತುಂಬುವ ಪ್ರಕ್ರಿಯೆಗೂ ತೊಡಕಾಗಿ, ಹಣದ ಕೊರತೆ ಉಂಟಾಗಬಹುದು. ಹಾಗಾಗೀ ಬ್ಯಾಂಕ್ ನಲ್ಲಿ ನಿಮ್ಮ ಕೆಲಸ ಏನೇ ಇರಲಿ ಹಾಗೇ ಅವುಗಳನ್ನು ಮಾಡಿಕೊಂಡರೆ ಉತ್ತಮ ಹಾಗೇ ನಿಮ್ಮ ಪಾಕೆಟ್ ನಲ್ಲಿ ನಿಮ್ಮ ಖರ್ಚಿಗೆ ಬೇಕಾಗುಷ್ಟು ಹಣವಿದ್ದರೆ ಉತ್ತಮ, ಯಾಕಂದರೆ ಒಂದು ವೇಳೆ ನಿಮ್ಮ ಅಕೌಂಟಿನಲ್ಲಿ ಹಣವಿದ್ದರು ಸಹ ಎಟಿಎಂ ನಲ್ಲಿ ಹಣ ವಿರುವುದು ಅನುಮಾನವಾಗಿದೆ.

ವೇತನ ಪರಿಷ್ಕರಣೆ ಮಾಡಬೇಕೆಂದು ಈಗಾಗಲೇ ಸಾಕಷ್ಟು ಬಾರಿ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಜೊತೆಗೆ ಮಾತುಕತೆ ನಡೆದಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರ ಮಧ್ಯ ಪ್ರವೇಶ ಮಾಡಿ ವೇತನ ಪರಿಷ್ಕರಣೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ. (ಎನ್.ಬಿ)

Leave a Reply

comments

Related Articles

error: