ಸುದ್ದಿ ಸಂಕ್ಷಿಪ್ತ

ಜೂ.2ರಂದು ಚರ್ಚಾಕೂಟ

ಮೈಸೂರು,ಮೇ.29:- ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಪ್ರತಿ ವರ್ಷ ಬಿ.ಇ ಬಯೋಟೆಕ್ನಾಲಜಿ ಕೋರ್ಸನ್ನು ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು, ಅವರುಗಳ ಪೋಷಕರು ಹಾಗೂ ವಿಜ್ಞಾನ ಕಾಲೇಜಿನ ಉಪನ್ಯಾಸಕರುಗಳಿಗೆ ಚರ್ಚಾಕೂಟವನ್ನು ಸತತವಾಗಿ ನಾಲ್ಕು ವರ್ಷಗಳಿಂದ ಆಯೋಜಿಸುತ್ತಿದೆ.

ಬಯೋಟೆಕ್ನಾಲಜಿ ಕ್ಷೇತ್ರದ ವೃತ್ತಿ ಅವಕಾಶಗಳ ಸ್ಪಷ್ಟ ಒಳನೋಟವನ್ನು ತಿಳಿಸುವ ನಿಟಿನಲ್ಲಿ ’ಬಯೋಟೆಕ್ನಾಲಜಿ : ಇಂಜಿನಿಯರಿಂಗ್ ಹಾರ್ನೆಸಿಂಗ್ ಕೆರಿಯರ್ ಆಪರ್ಚುನಿಟೀಸ್’ ಎಂಬ ಚರ್ಚಾಕೂಟವನ್ನು ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಛಯ ಸೆಮಿನಾರ್ ಹಾಲ್, ಸುವರ್ಣ ಮಹೋತ್ಸವ ¨ಭವನದ  ಬಯೋಟೆಕ್ನಾಲಜಿ ವಿಭಾಗದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗಾಗಿ ಜೂ.2ರಂದು ಸಾಯಂಕಾಲ 4.30ಕ್ಕೆ  ಏರ್ಪಡಿಸಲಾಗಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: