ಮನರಂಜನೆ

ದೀಪಿಕಾ ಧರಿಸಿದ್ದ ವಿಂಟೇಜ್ ಲಾಂಗ್ ಜಾಕೆಟ್ ಬೆಲೆ ಎಷ್ಟು ಗೊತ್ತಾ.?

ಮುಂಬೈ,ಮೇ 29-ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ತಾವು ಧರಿಸಿದ್ದ ಬಟ್ಟೆ ವಿಚಾರವಾಗಿ ಚರ್ಚೆಯಲ್ಲಿದ್ದಾರೆ. ದೀಪಿ ಅಂತಹ ಯಾವ ಬಟ್ಟೆ ಧರಿಸಿದ್ದರು? ಎಂಬುದನ್ನು ತಿಳಿದುಕೊಳ್ಳಲು ಸುದ್ದಿ ಓದಿ…

ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸಂದರ್ಭದಲ್ಲಿ ಧರಿಸಿದ್ದ ಕಂದು ಬಣ್ಣದ ಲಾಂಗ್ ಜಾಕೆಟ್ ಚರ್ಚೆಯ ವಿಷಯವಾಗಿದೆ. ಅದಕ್ಕೆ ಕಾರಣ ಆ ಜಾಕೆಟ್ ನ ಬೆಲೆ. ಹೌದು, ದೀಪಿಕಾ ಧರಿಸಿದ್ದ ವಿಂಟೇಜ್ ಲಾಂಗ್ ಜಾಕೆಟ್ Burberry ಕಂಪನಿಯದ್ದು. ಇದರ ಬೆಲೆ 2 ಲಕ್ಷ ರೂ. ಗಳಾಗಿದೆ.

ದೀಪಿಕಾ ಈ ಜಾಕೆಟ್ ಜತೆ ಲಾಂಗ್ ಹೈವೆಸ್ಟ್ ಜೀನ್ಸ್ ಹಾಗೂ ಬಿಳಿ ಟೀ ಶರ್ಟ್ ಧರಿಸಿದ್ದಳು. ಕಂದು ಬಣ್ಣದ ಲೆದರ್ ಬ್ಯಾಗ್ ಹಿಡಿದಿದ್ದ ದೀಪಿ ಸುಂದರವಾಗಿ ಕಾಣ್ತಿದ್ದಳು.

ಸದ್ಯ ದೀಪಿಕಾ ಯಾವುದೇ ಸಿನಿಮಾ ಮಾಡ್ತಿಲ್ಲ. ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿರುವ ದೀಪಿಕಾ ಮದುವೆಗೆ ತಯಾರಿ ನಡೆಸುತ್ತಿದ್ದಾಳೆ ಎನ್ನಲಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ರಣವೀರ್ ಸಿಂಗ್ ತಾಯಿಯನ್ನು ದೀಪಿಕಾ ಇನ್ಸ್ಟ್ರಾಗ್ರಾಮ್ ನಲ್ಲಿ ಫಾಲೋ ಮಾಡ್ತಿದ್ದಾಳೆ. ರಣವೀರ್ ಸಿಂಗ್, ದೀಪಿಕಾ ಸಹೋದರಿಯನ್ನು ಫಾಲೋ ಮಾಡ್ತಿದ್ದಾನೆ. (ಎಂ.ಎನ್)

Leave a Reply

comments

Related Articles

error: