ಮೈಸೂರು

ದ್ವಿಚಕ್ರ ವಾಹನ ಕಳ್ಳನ ಬಂಧನ: 2 ಬೈಕ್ ವಶ

ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿದ ಮೈಸೂರಿನ ಮಂಡಿ ಠಾಣೆಯ ಪೊಲೀಸರು 80 ಸಾವಿರ ರೂ. ಮೌಲ್ಯದ ಎರಡು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಉದಯಗಿರಿ ಬಳಿಯ ಗೌಸಿಯಾನಗರ ನಿವಾಸಿ ಗೌಸ್‍ಪೀರ್(22) ಬಂಧಿತ ಆರೋಪಿ. ಈತ ಮಂಡಿ ಮೊಹಲ್ಲಾ ಡ್ರೈವರ್ಸ್ ಹೋಟೆಲ್ ಬಳಿ ಪಲ್ಸರ್ ಬೈಕ್ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ಎನ್.ಆರ್. ಠಾಣೆ ವ್ಯಾಪ್ತಿಯಲ್ಲಿ ಬಜಾಜ್ ಪಲ್ಸರ್ ಮತ್ತು ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ಟಿವಿಎಸ್ ಅಪಾಚ್ಚಿ ಬೈಕ್‍ಗಳನ್ನು ಕಳವು ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬೀಗ ಹಾಕದೆ ನಿಲ್ಲಿಸಿರುವ ಬೈಕ್‍ಗಳನ್ನು ಕಳ್ಳತನ ಮಾಡಿರುವುದು ಪೊಲೀಸರ ವಚಾರಣೆಯಿಂದ ತಿಳಿದುಬಂದಿದೆ. ಈತನ ವಿರುದ್ಧ ಈ ಹಿಂದೆ ದೇವರಾಜ ಠಾಣೆಯಲ್ಲಿ ಮೋಸ ಮತ್ತು ಸುಲಿಗೆ ಪ್ರಕರಣಗಳು ವರದಿಯಾಗಿವೆ.

ಮಂಡಿ ಠಾಣೆಯ ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ ಕೆ. ತಳವಾರ್, ಎಸ್‍ಐ ಬಿ. ಬಸವರಾಜು, ಸಿಬ್ಬಂದಿ ಡಿ.ಜಿ. ಚಂದ್ರೇಗೌಡ, ಎಸ್. ಜಯಕುಮಾರ್, ರವಿ ಕುಮಾರ್, ರಾಜೇಂದ್ರ, ಮಲ್ಲಿಕಾರ್ಜುನ ತಂಡದಲ್ಲಿದ್ದರು.

Leave a Reply

comments

Related Articles

error: