ಮೈಸೂರು

ಅತಿಥಿ ಉಪನ್ಯಾಸಕರಿಗೆ ಮತದಾನ : ನ್ಯಾಯಕ್ಕೆ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಮೊರೆ

ಮೈಸೂರು, ಮೇ.29 : ಅತಿಥಿ ಉಪನ್ಯಾಸಕರಿಗೆ ಮತದಾನದ ಹಕ್ಕನ್ನು ಮೊಟಕುಗೊಳಿಸಿರುವ ಚುನಾವಣಾ ಆಯೋಗದ ನೀತಿಯನ್ನು ಖಂಡಿಸಿ ತಡೆಯಾಜ್ಞೆ ನೀಡಲು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿರುವೆ ಎಂದು ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ರಾಜ್ ತಿಳಿಸಿದರು.

ಅತಿಥಿ ಉಪನ್ಯಾಸಕರಿಗೆ ಮತದಾನಕ್ಕೆ ಅವಕಾಶ ನೀಡುವಲ್ಲಿ ಆಯೋಗ ತಾರತಮ್ಯ ನೀತಿ ಅನುಸರಿಸಲಾಗಿರುವುದು ಖಂಡನೀಯ, ಅಲ್ಲದೇ 2018ರ ಜನವರಿಯೊಳಗೆ ನಡೆದ ಮತದಾರರ ಪಟ್ಟಿಯಲ್ಲಿ ನೋಂದಾಣಿಯಾದ ಪ್ರತಿಯೊಬ್ಬರಿಗೂ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು,  ಆದರೆ, 3–4 ವರ್ಷ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿರುವವರಿಗೆ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ನೀಡಿದೆ.

ಇದರಿಂದ ಇತರೆ ಅತಿಥಿ ಉಪನ್ಯಾಸಕರಿಗೆ (1–2 ವರ್ಷ ಕರ್ತವ್ಯ ನಿರ್ವಹಿಸಿದ) ವಂಚಿಸಿದಂತಾಗುತ್ತದೆ. ಈ ಬಗ್ಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಪಿ.ಹೇಮಲತಾ ಅವರಿಗೆ ದೂರು ನೀಡಿದ್ದೇನೆ. 2 ದಿನದಲ್ಲಿ ಮಾಹಿತಿ ನೀಡಲಾಗುವುದು ಎಂದಿದ್ದಾರೆ. ಅವರ ಮಾಹಿತಿಗೆ ಅನುಸಾರವಾಗಿ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಣಾಳಿಕೆ:   ಇದೇ ಸಂದರ್ಭದಲ್ಲಿ 9 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ಪ್ರಣಾಳಿಕೆಯಲ್ಲಿ  ಶಿಕ್ಷಕರ ಸಾಮಾಜಿಕ–ಆರ್ಥಿಕ ಅಭಿವೃದ್ಧಿಗೆ ಪ್ರಾಮುಖ್ಯತೆ, ಶಿಕ್ಷಕರಿಗಾಗಿ ಸಮೂಹ ವಿಮೆ ಯೋಜನೆ, ಅನಾರೋಗ್ಯದ ಸಂದರ್ಭದಲ್ಲಿ ಹಣಕಾಸು ನೆರವು, ಅತಿಥಿ ಉಪನ್ಯಾಸಕರಿಗೆ ಇಎಸ್‌ಐ ಮತ್ತು ಪಿಎಫ್‌ ಹೀಗೆ ಹಲವು ಸೇವಾ–ಸೌಲಭ್ಯಗಳನ್ನು ನೀಡಲಾಗುವುದು ಎಂದು ಪ್ರಣಾಳಿಕೆ ಹೊರಡಿಸಿದರು.

ಗೋಷ್ಠಿಯಲ್ಲಿ ರಾಜೇಶ್ ಜೊತೆಯಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: