ಪ್ರಮುಖ ಸುದ್ದಿಮೈಸೂರು

ಚಿಂತಕ ಕೆ.ಎಸ್‌ ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಐವರ ಬಂಧನ

ರಾಜ್ಯ(ಬೆಂಗಳೂರು)ಮೇ.30:-  ಚಿಂತಕ ಕೆ.ಎಸ್‌ ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈ ಮೂಲದ ಅಮಿತ್ ದೇಗ್ವೇಕರ್ ಅಲಿಯಾಸ್ ಪ್ರದೀಪ್, ಮನೋಹರ್ ದುಂಡಪ್ಪ, ನಿಹಾಲ್, ಅಮೋಲ್ ಕಾಳೆ ಮತ್ತು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸುಜೀತ್ ಅಲಿಯಾಸ್ ಪ್ರವೀಣ್ ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೇ.20 ರಂದೇ ಇವರನ್ನು ಬಂಧಿಸಲಾಗಿದ್ದು, ಕಳೆದ ಹತ್ತು ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

ಗೌರಿ ಹತ್ಯೆ ತನಿಖೆ ವೇಳೆ ಮಾಹಿತಿ ಬಹಿರಂಗ

ಪತ್ರಕರ್ತೆ ಗೌರಿ ಹತ್ಯೆ ತನಿಖೆ ವೇಳೆ ಚಿಂತಕ ಭಗವಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಅಧಿಕಾರಿಗಳು ಐವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳಿಗೂ ಮತ್ತು ಗೌರಿ ಹತ್ಯೆಗೂ ಸಂಬಂಧ ಇದೆ ಎನ್ನುವ ಅನುಮಾನ ಎಸ್‌ಐಟಿ ಅಧಿಕಾರಿಗಳಿಗಿದೆ.  ಆರೋಪಿಗಳಿಗೂ ಮತ್ತು ಗೌರಿ ಹತ್ಯೆ ಪ್ರಕರಣದಲ್ಲಿ ಈಗ ಬಂಧಿತನಾಗಿರುವ ನವೀನ್ ಕುಮಾರ್ ಗೂ ಸಂಬಂಧ ಇದೆ ಎನ್ನಲಾಗಿದ್ದು, ಭಗವಾನ್ ಹತ್ಯೆಗೆ ಯತ್ನಿಸಲಾಗಿತ್ತು ಎನ್ನುವ ಮಾಹಿತಿ ನವೀನ್ ಕುಮಾರ್ ವಿಚಾರಣೆ ವೇಳೆ ತಿಳಿದು ಬಂದಿತ್ತು. ಅದರ ಆಧಾರದ ಮೇಲೆ ಈಗ ಐವರನ್ನು ಬಂಧಿಸಲಾಗಿದ್ದು, ಪ್ರಾಥಮಿಕ ವಿಚಾರಣೆ ನಡೆಸಿದಾಗ ಆರೋಪಿಗಳು ಯಾವುದೇ ಮಾಹಿತಿ ಬಾಯಿಬಿಟ್ಟಿಲ್ಲ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: