ಮೈಸೂರು

ಕಲೆ ವಿಲಾಸಕ್ಕಾಗಿ ಅಲ್ಲ ಬದುಕಿನ ವಿಕಾಸಕ್ಕಾಗಿ ಮಾತ್ರ : ಡಾ. ಬಿ.ವಿ. ರಾಜಾರಾಂ ಅಭಿಮತ

ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಹಾಗೂ ಬದುಕು ಕಟ್ಟಿಕೊಳ್ಳಲು ಬದುಕು ಸಹಕಾರಿಯಾಗಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ತಿಳಿಸಿದರು.

ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿಯಲ್ಲಿ ಅಭಿಜಾತ ರಂಗಭೂಮಿಯೊಂದಿಗೆ ಅನುಸಂಧಾನ ಎಂಬ ವಿಷಯದ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಮಾಜಿ ರಂಗಾಯಣ ನಿರ್ದೇಶಕರಾದ ಡಾ.ಬಿ.ವಿ. ರಾಜಾರಾಂ ಅವರು ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮೊದಲು ತರಲೇ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ನಾಟಕ ಹಾಕು ಎನ್ನಲಾಗುತ್ತಿತ್ತು. ಆದರೆ ಇದೀಗ ಒಬ್ಬ ಉತ್ತಮ ಪ್ರಜೆಯಾಗಲು, ಬದುಕು ಕಟ್ಟಿಕೊಳ್ಳಲು ರಂಗಭೂಮಿ ಸಹಕಾರಿಯಾಗಿದೆ. ಅತಿ ಹೆಚ್ಚಾಗಿ ಹಣ , ಗೌರವ ಗಳಿಸಿದವರು ಕಲಾವಿದರಾಗಿದ್ದಾರೆ. ಕಲೆ ವಿಲಾಸಕ್ಕಾಗಲ್ಲ. ಬದುಕಿನ ವಿಕಾಸಕ್ಕಾಗಿ ಮಾತ್ರ ಎಂದು ಅಭಿಪ್ರಾಯಪಟ್ಟರು.

ಶೇಕ್ಸಪೀಯರ್ ಹಾಗೂ ಭರತನವರೆಗೂ ವಿಭಿನ್ನವಾದ ನಾಟಕ ಹಾಗೂ ಅದರ ರೂಪಕಗಳು ಕಂಡು ಬರುತ್ತವೆ. ನಾಲ್ಕು ರೀತಿಯ ನಾಟಕ ರೂಪಕಗಳಿವೆ.  ಮೊದಲು ಇಬ್ಬರು ಮೂವರು ನಾಟಕಗಳನ್ನು ಮಾಡುತ್ತಿದ್ದರು. ಆದರೆ ಇಂದು ನಾವು 30 ಮಂದಿ ನಾಟಕಗಳನ್ನು  ಮಾಡುತ್ತೇವೆ. ಹೊಸ ರೀತಿಯ ಪ್ರಯೋಗಗಳೇ ರಂಗಭೂಮಿಯ ಜೀವಾಳ. ಆದರೆ ಇತ್ತೀಚಿನ ದಿನಗಳಲ್ಲಿ ನಾಟಕ ಎಂದರೇ ತಾತ್ಸಾರ ಭಾವನೆ ತಾಳಲಾಗುತ್ತಿದೆ.ಅದನ್ನು ಹೊಡೆದೋಡಿಸಬೇಕು ಎಂದು ಕಿವಿಮಾತು ಹೇಳಿದರು. ನಾಟಕಗಳು ನಮ್ಮ ಓದಿಗೂ ಪೂರಕ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಸರ್ವಮಂಗಳ ಶಂಕರ್, ಕುಲಸಚಿವ ಡಾ.ನಿರಂಜನ ವಾನಳ್ಳಿ, ರಂಗಕರ್ಮಿಗಳಾದ ಕೆ.ಆರ್. ಸುಮತಿ, ಪ್ರೊ. ಎಚ್.ಎಸ್. ಉಮೇಶ್, ಪ್ರೊ. ತುಳಸಿ ರಾಮಚಂದ್ರ ಹಿರಿಯ ಜಾನಪದ ವಿದ್ವಾಂಸ ಪಿ.ಕೆ.ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಟಕ ವಿಭಾಗದ ವತಿಯಿಂದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

Leave a Reply

comments

Related Articles

error: