ಕರ್ನಾಟಕಮೈಸೂರು

ದಸರಾ ಉತ್ಸವದ ಅಧಿಕೃತ ಭಿತ್ತಿಪತ್ರಗಳ ಬಿಡುಗಡೆ

ಐತಿಹಾಸಿಕ ಮೈಸೂರು ದಸರಾ ಆಚರಣೆಯ ಮಾಹಿತಿ ತಿಳಿಸುವ ಅಧಿಕೃತ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು.

ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರು ಸಂಸದ ಧ್ರುವನಾರಾಯಣ, ಜಿಲ್ಲಾಧಿಕಾರಿ ರಣದೀಪ್, ಶಾಸಕ ಸೋಮಶೇಖರ ಮತ್ತು ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಸಚಿವರು, ದಸರಾ ಆಚರಣೆಯ ಕುರಿತು ಎಲ್ಲರಿಗೂ ತಿಳಿದಿದೆ. ಇನ್ನೂ ಹೆಚ್ಚಿನ ಜನರನ್ನು ತಲುಪಲು ಭಿತ್ತಿಪತ್ರಗಳ ಅವಶ್ಯಕತೆ ಇದೆ ಎಂದರು. ವಿಡಿಯೋಗಳು, ಎಫ್.ಎಂ. ಚಾನಲ್ ಗಳಲ್ಲಿಯೂ ಈ ಕುರಿತು ತಿಳಿಸಲಾಗುವುದು. 10/20 ಅಡಿ ಉದ್ದದ ದಸರಾ ಭಿತ್ತಿಪತ್ರವನ್ನು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಳವಡಿಸಲಾಗುವುದು. ಸುಮಾರು 400 ಭಿತ್ತಿಪತ್ರಗಳು ಜಿಲ್ಲೆಯಾದ್ಯಂತ, 1000 ಭಿತ್ತಿಪತ್ರಗಳನ್ನು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದರು.

ರೈಲ್ವೆನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿಯೂ ದಸರಾ ಉತ್ಸವ ಭಿತ್ತಿಚಿತ್ರ ಅಳವಡಿಸಲಾಗುವುದು. ಮೈಸೂರು ದಸರಾ ಉತ್ಸವ ಕುರಿತು ಈಗಾಗಲೇ ಕನ್ನಡ ಮತ್ತು ಇಂಗ್ಲೀಷ್ ಗಳಲ್ಲಿ ವೆಬ್`ಸೈಟ್ ಸಿದ್ದಗೊಳಿಸಲಾಗಿದೆ. ಮೈಸೂರು ನಗರ ಪಾಲಿಕೆಯು ದಸರಾ ಉತ್ಸವಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಶೀಘ್ರದಲ್ಲಿಯೇ ಮುಗಿಸಲಿದೆ ಎಂದು ತಿಳಿಸಿದರು.

ಪಿವಿ ಸಿಂಧು ಅನುಪಸ್ಥಿತಿ

ರಿಯೋ ಒಲಂಪಿಕ್ ಅಲ್ಲಿ ಬೆಳ್ಳಿ ಪದಕ ವಿಜೇತ ಪಿ.ವಿ. ಸಿಂಧು ಅವರನ್ನು ದಸರಾ ಕ್ರೀಡೋತ್ಸವ ಉದ್ಘಾಟನೆಗೆ ಕರೆಯಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಬರಲಾಗುತ್ತಿಲ್ಲ. ಅದಕ್ಕಾಗಿ ಸಾಕ್ಷಿ ಮಲ್ಲಿಕ್, ದೀಪಾ ಕರ್ಮಾಕರ್ ಅವರನ್ನು ಸಂಪರ್ಕಿಸಲಾಗಿದೆ ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಡಿ. ರಣದೀಪ್ ಹೇಳಿದ್ದಾರೆ.

Leave a Reply

comments

Related Articles

error: