ಪ್ರಮುಖ ಸುದ್ದಿಮೈಸೂರು

ಮೈಸೂರಿನ ನೂತನ ಮೇಯರ್‍ ಆಗಿ ಜೆಡಿಎಸ್‍ನ ಎಂ.ಜೆ. ರವಿಕುಮಾರ್

election-4-web

ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್-ಬಿಜೆಪಿ ದೋಸ್ತಿ ಮುಂದುವರಿದಿದ್ದು, ನೂತನ ಮೇಯರ್ ಆಗಿ ಜೆಡಿಎಸ್ ಅಭ್ಯರ್ಥಿ ಎಂ.ಜೆ.ರವಿಕುಮಾರ್ (ಚಿನ್ನಿ ರವಿ), ಉಪಮೇಯರ್ ಆಗಿ ಬಿಜೆಪಿಯ ರತ್ನ ಲಕ್ಷ್ಮಣ್ ಆಯ್ಕೆಯಾಗಿದ್ದಾರೆ.ratna-lakshman

ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ವಿರುದ್ಧ 12 ಮತಗಳ ಅಂತರದಲ್ಲಿ ಜಯಗಳಿಸಿದ ರವಿಕುಮಾರ್ ಮೇಯರ್ ಗದ್ದುಗೆ ಅಲಂಕರಿಸಿದರು. ಇನ್ನು ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ರತ್ನ ಲಕ್ಷ್ಮಣ್ ಕಾಂಗ್ರೆಸ್‍ನ ಸಿ.ಎಸ್.ರಜನಿ ವಿರುದ್ಧ 10 ಮತಗಳ ಅಂತರದಲ್ಲಿ ಜಯಗಳಿಸಿದರು. ರವಿಕುಮಾರ್ 42 ಮತ ಪಡೆದರೆ, ಜಗದೀಶ್ 30 ಮತಗಳನ್ನು ಪಡೆದರು. ರತ್ನ ಲಕ್ಷ್ಮಣ್ 41 ಹಾಗೂ ರಜನಿ 31 ಮತಗಳನ್ನು ಪಡೆದರು.

ಚುನಾವಣಾಧಿಕಾರಿ ಹಾಗೂ ಉಸ್ತುವಾರಿ ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ಡಿ.ರಂದೀಪ್, ಪಾಲಿಕೆ ಆಯುಕ್ತ ಜಗದೀಶ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿದರು. ಬೆಳಗ್ಗೆ 8ರಿಂದ 9.30ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. 11.30ರ ವೇಳೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. 65 ನಗರ ಪಾಲಿಕೆ ಸದಸ್ಯರು, ನಾಲ್ವರು ಜೆಡಿಎಸ್, ನಾಲ್ವರು ಕಾಂಗ್ರೆಸ್ ಹಾಗೂ ಓರ್ವ ಬಿಜೆಪಿ ಚುನಾಯಿತ ಪ್ರತಿನಿಧಿ ಸೇರಿ ಒಟ್ಟು 74 ಮಂದಿ ಮತ ಚಲಾಯಿಸಿದರು.

ರವಿಕುಮಾರ್ ಮತ್ತು ರತ್ನ ಲಕ್ಷ್ಮಣ್ ಪರವಾಗಿ ಶಾಸಕ ಟಿ.ಟಿ. ದೇವೇಗೌಡ, ಎಮ್‍ಎಲ್‍ಸಿಗಳಾದ ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಸಂದೇಶ್ ನಾಗರಾಜ್, ಸಂಸದರಾದ ಪ್ರತಾಪ್ ಸಿಂಹ ಮತ್ತು 37 ಪಾಲಿಕೆ ಸದಸ್ಯರು ಮತ ಚಲಾಯಿಸಿದ್ದರು.

ಮತ್ತೆ ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, 35ನೇ  ವಾರ್ಡಿನ ಪಾಲಿಕೆ  ಸದಸ್ಯ  ರವಿ ಕುಮಾರ್ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ನ ಜಗದೀಶ್ ಪರ 30 ಮತಗಳು ಚಲಾವಣೆಯಾಗಿದ್ದು, ಸಚಿವ ತನ್ವೀರ್ ಸೇಠ್, ಶಾಸಕರಾದ ವಾಸು ಸೋಮಶೇಖರ್ ಎಂಎಲ್‍ಸಿ ಧರ್ಮಸೇನಾ ಅವರ ಮತಗಳು ಸೇರಿದಂತೆ 30 ಮತಗಳು ಚಲಾವಣೆಯಾಗಿವೆ.

ವಾರ್ಡ್:1ರ ಬಿಜೆಪಿ ಸದಸ್ಯ ಬಿ.ವಿ. ಮಂಜುನಾಥ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲೂ ಇತರರಸಹಾಯದಿಂದ ಆಗಮಿಸಿ ಮತ ಚಲಾಯಿಸಿದರು. ಆಯತಪ್ಪಿ ಬಿದ್ದಿದ್ದರಿಂದ ಅವರಿಗೆ ಕಣ್ಣೇಟು ಆಗಿದೆಎನ್ನಲಾಗಿದೆ.

ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ರವಿಕುಮಾರ್, ಮೈಸೂರು ದೇಶದ ಸ್ವಚ್ಛ ನಗರಿ ಎಂದು ಎರಡು ಬಾರಿ ಬಿರುದು ಪಡೆದುಕೊಂಡಿದ್ದು ಸತತ ಮೂರನೇ ಬಾರಿಯೂ ಸ್ವಚ್ಛ ನಗರಿ ಎಂ ಹೆಗ್ಗಳಿಕೆ ಪಾತ್ರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ. ನಗರದಲ್ಲಿನ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.

4 ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ:

ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ: ಚನ್ನಪ್ಪ(ವಾರ್ಡ್ ನಂ.8), ಕೆ.ವಿ. ಮಲ್ಲೇಶ್(ವಾರ್ಡ್ ನಂ.18), ಎಂ. ಮಹದೇವಮ್ಮ(ವಾರ್ಡ್ ನಂ.63), ಶಿವಕುಮಾರ(ವಾರ್ಡ್ ನಂ.2), ಸಿ.ಎಸ್.ರಜನಿ(ವಾರ್ಡ್ ನಂ.56), ಎಸ್.ಉಮಾಮಣಿ(ವಾರ್ಡ್ ನಂ.11), ರೇಷ್ಮಾ ಜಮೀನ್(ವಾರ್ಡ್ ನಂ.59).

ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಆರ್.ರವೀಂದ್ರಕುಮಾರ್(ವಾರ್ಡ್ ನಂ.41), ಮಹದೇವಪ್ಪ(ವಾರ್ಡ್ ನಂ.25), ರಾಮು ಟಿ. (ವಾರ್ಡ್ ನಂ.42), ಆರ್.ಕಮಲ(ವಾರ್ಡ್ ನಂ.50), ಬಿ.ಕೆ. ಪುಷ್ಪವತಿ(ವಾರ್ಡ್ ನಂ.45), ಪಿ.ಪ್ರಶಾಂತ್(ವಾರ್ಡ್ ನಂ.36), ಎನ್. ಸುನಿಲ್ ಕುಮಾರ್(ವಾರ್ಡ್ ನಂ.4).

ಪಟ್ಟಣ ಯೋಜನೆ ಮತ್ತು ಸುದಾರಣೆಗಾಗಿ ಸ್ಥಾಯಿ ಸಮಿತಿ: ಕೆ.ಪಿ. ಅಶ್ವಿನಿ(ವಾರ್ಡ್ ನಂ.58), ಕೆಂಪಣ್ಣ(ವಾರ್ಡ್ ನಂ.13), ಎಚ್.ಎಸ್. ನಂದೀಶ್ ಪ್ರೀತಂ(ವಾರ್ಡ್ ನಂ.21), ಅನುಸೂಯ(ವಾರ್ಡ್ ನಂ.30), ರಾಜಲಕ್ಷ್ಮಿ(ವಾರ್ಡ್ ನಂ.37), ತಸ್ನೀಂ(ವಾರ್ಡ್ ನಂ.40), ಸಮೀನಾ ಜಬೀನ್(ವಾರ್ಡ್ ನಂ.3).

ಲೆಕ್ಕಪತ್ರ ಸ್ಥಾಯಿ ಸಮಿತಿ: ರಾಮಪ್ರಸಾದ್(ವಾರ್ಡ್ ನಂ.6), ಸೀಮಾಪ್ರಸಾದ್(ವಾರ್ಡ್ ನಂ.15), ಅಯೂಬ್ ಖಾನ್(ವಾರ್ಡ್ ನಂ.52), ಸುನಿಲ್ ಎಂ. (ವಾರ್ಡ್ ನಂ.10), ಪುರುಷೋತ್ತಮ್(ವಾರ್ಡ್ ನಂ.7), ಫೈರೋಜ್‍ ಖಾನ್(ವಾರ್ಡ್ ನಂ.53), ಎಸ್. ಸತೀಶ್(ಸಂದೇಶ್ ಸ್ವಾಮಿ) (ವಾರ್ಡ್ ನಂ.62).

Leave a Reply

comments

Related Articles

error: