ಮನರಂಜನೆ

ಕ್ರೇಜಿಸ್ಟಾರ್ ಗೆ ಶುಭಕೋರಿದ ಸ್ಯಾಂಡಲ್ ವುಡ್ ತಾರೆಯರು

ಬೆಂಗಳೂರು,ಮೇ 30-ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ಮಗ ಮನೋರಂಜನ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ ಜಗ್ಗೇಶ್, ರಮೇಶ್ ಅರವಿಂದ್, ನಿರ್ದೇಶಕ ಸಿಂಪಲ್ ಸುನಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಟಿ ಮಾನ್ವಿತಾ ಹರೀಶ್ ಸೇರಿದಂತೆ ಹಲವರು ಶುಭಾಶಯ ತಿಳಿಸಿದ್ದಾರೆ.

ನನ್ನ ಶಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ಆರೋಗ್ಯ ಹಾಗೂ ಸಂತೋಷವಾದ ಜೀವನ ನಿಮ್ಮದಾಗಲಿ ಎಂದು ಮಗ ಮನೋರಂಜನ್ ರವಿಚಂದ್ರನ್ ಶುಭಾಶಯ ಕೋರಿದ್ದಾರೆ.

 

ನಟ ಕಿಚ್ಚ ಸುದೀಪ್, ರವಿಚಂದ್ರನ್ ಸಿಕ್ಕಾಪಟ್ಟೆ ಕ್ರೇಜಿ. ಅಷ್ಟೇ ಮಿಸ್ಟರಿ. ನಾನು ಅವರ ಸಿನಿಮಾಗಳ ಅಭಿಮಾನಿ. ಅವರೊಂದಿಗೆ ಕೆಲಸ ಮಾಡಲು, ಅವರಿಗೆ ಆಕ್ಷನ್ ಕಟ್ ಹೇಳುವ ಅವಕಾಶ ನನಗೆ ಸಿಕ್ತು. ಅವರೊಂದಿಗೆ ನಾನು ಕಳೆದಿರುವ ಕ್ಷಣಗಳು ಅಮೂಲ್ಯವಾದವು. ಹೀಗಿದ್ದರೂ, ‘ರವಿಚಂದ್ರನ್ ಹೇಗೆ?’ ಎಂದು ಯಾರಾದರೂ ಕೇಳಿದರೆ… ಸೂಕ್ತ ಉತ್ತರ ಕೊಡಲು ನಾನು ವಿಫಲನಾಗುವೆ. ಅವರನ್ನ ಅರ್ಥಮಾಡಿಕೊಳ್ಳುವುದು ಸುಲಭ ಅಲ್ಲ. ಪ್ರತಿ ನಿತ್ಯ, ಪ್ರತಿ ಕ್ಷಣ ಅವರು ನಮ್ಮನ್ನ ನಿಬ್ಬೆರಗಾಗಿಸುತ್ತಾರೆ. ಅವರ ತತ್ವ-ಸಿದ್ಧಾಂತಗಳು ಬೇರೆಯದ್ದೇ ಮಟ್ಟದಲ್ಲಿದೆ. ಹೀಗಾಗಿ, ಅವರು ಹೀಗೇ ಎಂಬ ತೀರ್ಮಾನಕ್ಕೆ ಬರುವುದು ಕಷ್ಟ. ಜ್ಞಾನ ಭಂಡಾರ, ಶಕ್ತಿ ಹಾಗೂ ನಂಬಿಕೆಯ ಪ್ಯಾಕೇಜ್ ಅವರು. ಕ್ರೇಜಿ ಸ್ಟಾರ್ ಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ಹೀಗೇ ನಮಗೆ ಮನರಂಜನೆ ಕೊಡುತ್ತಿರಿ. ಜನ್ಮದಿನದ ಶುಭಾಶಯಗಳು ಅಣ್ಣ ಎಂದು ಶುಭಾಶಯ ಕೋರಿ ಟ್ವಿಟ್ ಮಾಡಿದ್ದಾರೆ.

ನಟ ಜಗ್ಗೇಶ್, 1984 ರ ಕಷ್ಟದ ದಿನಗಳಲ್ಲಿ ಕೆಲಸ ಕೊಟ್ಟು, ಸಂಭಾವನೆ ನೀಡಿ ಬದುಕಿಗೆ ನಂಬಿಕೆ ಹುಟ್ಟಿಸಿದ ಕನ್ನಡದ ರಿಯಲ್ ಶೋ ಮ್ಯಾನ್ ಸಹೋದರ ರವಿಚಂದ್ರನ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೂರ್ಕಾಲ ಸುಖವಾಗಿ ಬಾಳಿ. ನನ್ನಂತೆ ಅನೇಕರ ಆಶಾ ಜ್ಯೋತಿಯಾಗಿ.. ಲವ್ ಯು ಬ್ರೋ ಎಂದು ಟ್ವಿಟ್ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟ್ ಮಾಡಿ, ಕನ್ನಡ ಚಿತ್ರರಂಗದ ಅಪ್ರತಿಮ ಕನಸುಗಾರ, ಕ್ರೇಜಿ ಸ್ಟಾರ್ ರವಿ ಸರ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು ಎಂದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕವನ್ನು ಸೃಷ್ಟಿ ಮಾಡಿದ..ರೂಪದಲ್ಲಿ ಚೆಲುವ ಅದ್ದೂರಿತನದಲ್ಲಿ ರಣಧೀರ ದೃಶ್ಯಚೌಕಟ್ಟಿನಲ್ಲಿ ಕನಸುಗಾರ ಕ್ರೇಜಿ಼ಸ್ಟಾರ್ ರವಿಚಂದ್ರನ್ ರವರಿಗೆ ಹುಟ್ಟು ಹಬ್ಬದ ಶುಭಾಷಯಗಳು ಎಂದು ನಿರ್ದೇಶಕ ಸಿಂಪಲ್ ಸುನಿ ಟ್ವಿಟ್ ಮಾಡಿದ್ದಾರೆ.

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಟ್ವಿಟ್ ಮಾಡಿ, ಹುಟ್ಟುಹಬ್ಬದ ಶುಭಾಶಯಗಳು ಕ್ರೇಜಿಸ್ಟಾರ್ ರವಿಚಂದ್ರನ್ ಸರ್. ನೀವು ಅಭಿನಯಿಸುತ್ತಿರುವ `ಪಡ್ಡೆಹುಲಿ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ನನಗೆ ದೊಡ್ಡ ಗೌರವ. ಪಡ್ಡೆ ಹುಲಿ ಚಿತ್ರತಂಡದಿಂದ ನಿಮಗೆ ಸಣ್ಣದೊಂದು ಕೊಡುಗೆ ಇದು ಎಂದು ಪಡ್ಡೆಹುಲಿ ಚಿತ್ರದಲ್ಲಿ ರವಿಚಂದ್ರನ್ ಅಭಿನಯದ ಬಗ್ಗೆ ರಿವೀಲ್ ಮಾಡುವ ಸಣ್ಣದೊಂದು ವಿಡಿಯೋದ ಯೂ ಟೂಬ್ ಲಿಂಕ್ ಅನ್ನು ಪೋಸ್ಟ್ ಮಾಡಿದ್ದಾರೆ.

ನಟ ರಮೇಶ್ ಅರವಿಂದ್, ರವಿಚಂದ್ರನ್ ಗೆ ಒಂದು ದಿನ ಮುಂಚಿತವಾಗಿಯೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ನಿನ್ನೆ (ಮೇ 29) ರೆಬಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಅಂಬರೀಷ್, ರವಿಚಂದ್ರನ್, ರಮೇಶ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ಇರುವ ಫೋಟೋವೊಂದನ್ನು ಪೋಸ್ಟ್ ಮಾಡಿ ನೆನಪುಗಳ ಮಾತು ಮಧುರ… ಹುಟ್ಟುಹಬ್ಬದ ಶುಭಾಶಯಗಳು ರೆಬಲ್ ಸ್ಟಾರ್ ಅಂಡ್ ಕ್ರೇಜಿಸ್ಟಾರ್ ಎಂದು ಟ್ವಿಟ್ ಮಾಡಿದ್ದಾರೆ.

ಇನ್ನು ನಟಿ ಮಾನ್ವಿತಾ ಹರೀಶ್, ಹುಟ್ಟುಹಬ್ಬದ ಶುಭಾಶಯಗಳು ರವಿಚಂದ್ರನ್ ಸರ್. ಹೀಗೆ ಸ್ಫೂರ್ತಿ ನೀಡುತ್ತೀರಿ ಎಂದು ಟ್ವಿಟ್ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: