ಮೈಸೂರು

ಜೂ.3ಕ್ಕೆ ಜ್ಯೋತಿಷ್ಯಶಾಸ್ತ್ರ ಪರೀಕ್ಷೆ : ಪ್ರಮಾಣ ಪತ್ರ ವಿತರಣೆ

ಮೈಸೂರು,ಮೇ.30 : ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರವು 2017-18ನೇ ಶೈಕ್ಷಣಿಕ ವರ್ಷದ ಜ್ಯೋತಿಷ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಜೂ.3ರ ಬೆಳಗ್ಗೆ 10.30ಕ್ಕೆ ಚಾಮುಂಡಿಪುರಂನ ಆರಾಧ್ಯ ಮಹಾಸಭಾದಲ್ಲಿ ಆಯೋಜಿಸಿದೆ.

ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠಾಧ್ಯಕ್ಷ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯ ವಹಿಸುವರು. ತುಮಕೂರು ವಿವಿಯ ಕುಲಪತಿ ಡಾ.ವೈ.ಎನ್.ಸಿದ್ದೇಗೌಡ ಉದ್ಘಾಟಿಸುವರು. ಶ್ರೀಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ ಪ್ರಮಾಣ ಪತ್ರ ವಿತರಿಸುವರು.

ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಕೆ.ಜಿ.ಪುಟ್ಟಹೊನ್ನಯ್ಯ ಅಧ್ಯಕ್ಷತೆ ವಹಿಸುವರು. ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜು ಪ್ರಾಂಶುಪಾಲ ಡಾ.ಕೆ.ಎಂ.ಮಹದೇವಯ್ಯ, ಆರಾಧ್ಯ ಮಹಾಸಭಾದ ಪಿ.ನಾಗಭೂಷಣಾರಾಧ್ಯ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: