ಕರ್ನಾಟಕಪ್ರಮುಖ ಸುದ್ದಿ

ಆರ್.ಆರ್.ನಗರ ಫಲಿತಾಂಶ: ಮುನಿರತ್ನಗೆ ಮುನ್ನಡೆ

ಬೆಂಗಳೂರು,ಮೇ 31-ರಾಜರಾಜೇಶ್ವರಿನಗರ ವಿಧಾನಸಭಾಕ್ಷೇತ್ರದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಏಳನೇ ಸುತ್ತಿನ ಅಂತ್ಯದ ವೇಳೆಗೆ ಮುನಿರತ್ನ 61517 ಮತಗಳ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ತುಳಸಿ ಮುನಿರಾಜು ಗೌಡ 25225, ಜೆಡಿಎಸ್ ನ ರಾಮಚಂದ್ರ 11626 ಮತಗಳನ್ನು ಪಡೆದುಕೊಂಡಿದ್ದಾರೆ.

ಎಂಟನೇ ಸುತ್ತಿನಲ್ಲೂ ಮುನಿರತ್ನ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮುನ್ನಿರತ್ನಗೆ 70224, ಮುನಿರಾಜುಗೌಡಗೆ 27926, ರಾಮಚಂದ್ರಗೆ 15450 ಮತಗಳು ಸಿಕ್ಕಿವೆ.

ಪಕ್ಷೇತರ ಅಭ್ಯರ್ಥಿ ಹುಚ್ಚ ವೆಂಕಟ್ 254 ಮತಗಳನ್ನು ಪಡೆದುಕೊಂಡಿದ್ದಾರೆ. 900 ನೋಟಾ ಮತಗಳು ಚಲಾವಣೆಯಾಗಿದೆ.

ಮೇ 28 ರಂದು ನಡೆದ ಚುನಾವಣೆಯಲ್ಲಿ ಶೇ.53 ರಷ್ಟು ಮತದಾನ ದಾಖಲಾಗಿತ್ತು. ರಾಜ್ಯದಲ್ಲಿ ಜೆಡಿಎಸ್ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರಿಗೆ ಬೆಂಬಲ ನೀಡಲು ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು ಒಪ್ಪದ ಕಾರಣ ಮೂರೂ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಮುನಿರಾಜು ಗೌಡ ಸ್ಪರ್ಧಿಸಿದ್ದಾರೆ.

ಒಟ್ಟು 421 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಒಟ್ಟು ಮತದಾರರ ಸಂಖ್ಯೆ 4,54,901, ಪುರುಷ ಮತದಾರರ ಸಂಖ್ಯೆ 2,38,015, ಮಹಿಳಾ ಮತದಾರರ ಸಂಖ್ಯೆ 2,16,821, ತೃತೀಯ ಲಿಂಗಿಗಳು ಒಟ್ಟು 65.

ಮನೆಯೊಂದರಲ್ಲಿ 9 ಸಾವಿರಕ್ಕೂ ಹೆಚ್ಚು ವೋಟರ್ ಐಡಿ ಪತ್ತೆಯಾದ ಕಾರಣ ಮೇ 12 ರಂದು ನಡೆಯಬೇಕಾಗಿದ್ದ ರಾಜರಾಜೇಶ್ವರಿ ನಗರದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಲಾಗಿತ್ತು. (ಎಂ.ಎನ್)

 

Leave a Reply

comments

Related Articles

error: