
ಪ್ರಮುಖ ಸುದ್ದಿ
ಮಹಾರಾಷ್ಟ್ರ ರಾಜ್ಯದ ಕೃಷಿ ಸಚಿವ ಪಾಂಡುರಂಗ ಫುಂಡ್ಕರ್ ಹೃದಯಾಘಾತದಿಂದ ನಿಧನ
ದೇಶ(ನವದೆಹಲಿ)ಮೇ.31;- ಮಹಾರಾಷ್ಟ್ರ ರಾಜ್ಯದ ಕೃಷಿ ಸಚಿವ ಪಾಂಡುರಂಗ ಫುಂಡ್ಕರ್ ಇಂದು ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
67ವರ್ಷದ ಇವರಿಗೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಜುಲೈ 2016ರಲ್ಲಿ ಫಡ್ನವೀಸ್ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದರು. ಬಿಜೆಪಿ ಹಿರಿಯ ನಾಯಕರಾಗಿದ್ದರಲ್ಲದೇ, ರಾಜ್ಯದಲ್ಲಿ ಪಕ್ಷದ ಪ್ರದೇಶಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಮೂರು ಭಾರಿ ಲೋಕಸಭಾ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಬುಧವಾರವೇ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪಾಂಡುರಂಗ ಫುಂಡ್ಕರ್ ನಿಧನಕ್ಕೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. (ಎಸ್.ಎಚ್)