ಕರ್ನಾಟಕಪ್ರಮುಖ ಸುದ್ದಿ

ವಿವಿ ಪ್ಯಾಟ್‌ ರಶೀದಿ ಸೋರಿಕೆ: ಚುನಾವಣೆಯಲ್ಲಿ ಅಕ್ರಮ ನಡೆದಿರುವ ಶಂಕೆ

ವಿಜಯಪುರ (ಮೇ 31): ಬಸವನಬಾಗೇವಾಡಿ ಕ್ಷೇತ್ರದ ದ ಉಕ್ಕಲಿ ಗ್ರಾಮದಲ್ಲಿ ವಿವಿ ಪ್ಯಾಟ್‌ ಮುದ್ರಿತ ಚಿಹ್ನೆ ಸಹಿತ ರಸೀದಿ ಪತ್ತೆಯಾಗಿದೆ. ಉಕ್ಕಲಿ ಗ್ರಾಮದ ನ್ಯೂ ಇಂಗ್ಲಿಷ್‌ ಶಾಲೆಯ ಮತಗಟ್ಟೆ ಸಂಖ್ಯೆ 12ರಲ್ಲಿ ಪಕ್ಷ ಕ್ಕೆವೊಂದಕ್ಕೆ ಮತ ಚಲಾಯಿಸಿದ ವಿವಿ ಪ್ಯಾಟ್‌ ಮುದ್ರಿತ ಚಿಹ್ನೆ ಸಹಿತ ರಸೀದಿ ಮೇ. 27ರಂದು ವ್ಯಕ್ತಿಯೊಬ್ಬರಿಗೆ ಸಿಕ್ಕಿದ್ದು, ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಕ್ಷೇತ್ರದ ಮನಗೂಳಿ ಶೆಡ್‌ವೊಂದರಲ್ಲಿ 8 ವಿವಿ ಪ್ಯಾಟ್‌ ಕಂಟೇನರ್‌ ಪತ್ತೆ ಪ್ರಕರಣ ಇನ್ನು ನೆನಪಿನಲ್ಲಿ ಇರುವ ವೇಳೆಯಲ್ಲಿಯೇ ಚುನಾವಣೆಗೆ ಸಂಬಂಧಟ್ಟ ಇಂತಹ ಇನ್ನೊಂದು ಆರೋಪ ಕೇಳಿ ಬಂದಿದೆ.

ಘಟನೆ ಸಂಬಂಧ ಜೆಡಿಎಸ್‌ನ ಪರಾಜಿತ ಅಭ್ಯರ್ಥಿ ಸೋಮನಗೌಡ ಪಾಟೀಲ ಮನಗೂಳಿ ಅವರು ರಾಜ್ಯ ಚುನಾವಣಾ ಆಯೋಗದ ಮೂಲಕ ಭಾರತ ಚುನಾವಣಾ ಆಯೋಗಕ್ಕೆ ಬುಧವಾರ ಲಿಖಿತ ದೂರು ಸಲ್ಲಿಸಿದ್ದಾರೆ. ವಿ.ವಿ ಪ್ಯಾಟ್‌ನಿಂದ ಹೊರ ಬಂದ ರಸೀದಿ ಮತಗಟ್ಟೆ ಸಿಬ್ಬಂದಿ ಬಳಿ ಭದ್ರವಾಗಿರಬೇಕಾಗಿತ್ತು. ಆದರೆ ಸೋರಿಕೆಯಾಗಿದ್ದು ಹೇಗೆ? ಎಂದು ಅವರು ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರಕು ಅವರು, ಮತದಾನದ ಪ್ರಕ್ರಿಯೆಯಲ್ಲಿನ ವಿವಿ ಪ್ಯಾಟ್‌ ರಶೀದಿಗಳನ್ನು ಕಪ್ಪು ಬಣ್ಣದ ಕವರ್‌ನಲ್ಲಿ ಹಾಕಿ ಸೀಲ್‌ ಮಾಡಬೇಕು. ಆ ಹಂತದಲ್ಲೇನಾದರೂ ರಶೀದಿ ಬಿದ್ದಿರಬಹುದು. ಅಥವಾ ಯಾರಾದರೂ ಪೋಲಿಂಗ್‌ ಏಜೆಂಟರು ತೆಗೆದುಕೊಂಡಿರಬಹುದು. ಆದರೆ ಮತದಾನ ಪ್ರಕ್ರಿಯೆ ನಡೆದ ವೇಳೆ ರಸೀದಿ ಬಿದ್ದಿರಲು ಸಾಧ್ಯವಿಲ್ಲ. ಆದರೂ ಘಟನೆ ಸಂಬಂಧ ಉಕ್ಕಲಿ ಗ್ರಾಮದಲ್ಲಿ ವಿವಿ ಪ್ಯಾಟ್‌ ರಶೀದಿ ಪತ್ತೆಯಾಗಿರುವ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಅಣಕು ಮತದಾನ ಪ್ರಕ್ರಿಯೆಯಲ್ಲಿನ ವಿವಿ ಪ್ಯಾಟ್‌ ರಶೀದಿಗಳನ್ನು ಕಪ್ಪು ಬಣ್ಣದ ಕವರ್‌ನಲ್ಲಿ ಹಾಕಿ ಸೀಲ್‌ ಮಾಡಬೇಕು. ಆ ಹಂತದಲ್ಲೇನಾದರೂ ರಶೀದಿ ಬಿದ್ದಿರಬಹುದು. ಅಥವಾ ಯಾರಾದರೂ ಪೋಲಿಂಗ್‌ ಏಜೆಂಟರು ತೆಗೆದುಕೊಂಡಿರಬಹುದು. ಆದರೆ ಮತದಾನ ಪ್ರಕ್ರಿಯೆ ನಡೆದ ವೇಳೆ ರಸೀದಿ ಬಿದ್ದಿರಲು ಸಾಧ್ಯವಿಲ್ಲ. ಆದರೂ ಉಕ್ಕಲಿ ಗ್ರಾಮದಲ್ಲಿ ವಿವಿ ಪ್ಯಾಟ್‌ ರಶೀದಿ ಪತ್ತೆಯಾಗಿರುವ ಬಗ್ಗೆ ವಿಚಾರಣೆ ನಡೆಸಲಾಗುವುದು ಅಂತ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: