ಕರ್ನಾಟಕ

8ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

ಮಂಗಳೂರು,ಮೇ 31-ಬಾಲಕಿಯೊಬ್ಬಳು ಅಪಾರ್ಟ್ ಮೆಂಟ್ ನ 8ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ.

ವಿಲ್ಸನ್ ಹಾಗೂ ಆಲಿತಾ ದಂಪತಿಯ ಪುತ್ರಿ ಶಾನೆಲ್ ಜೆನಿಶೀಯಾ ಡಿಸೋಜಾ (5) ಮೃತ ಬಾಲಕಿ. ನಗರದ ಶಕ್ತಿನಗರದಲ್ಲಿರುವ ಬಹುಮಹಡಿ ಕ್ಲಾಸಿಕ್ ಸಫಾಯರ್ ಅಪಾರ್ಟ್ ಮೆಂಟ್ 8 ನೇ ಮಹಡಿಯಿಂದ ಬಿದ್ದು ಶಾನೆಲ್ ಜೆನಿಶೀಯಾ ಡಿಸೋಜಾ ಮೃತಪಟ್ಟಿದ್ದಾಳೆ.

ವಿಲ್ಸನ್ ಸೆಬಾಸ್ಟಿಯನ್ ಡಿಸೋಜಾ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ಅಲಿತಾ ಡಿಸೋಜಾ ಹಾಗೂ ಪುತ್ರಿ ಶಾನೆಲ್ ಜೆನಿಶೀಯಾ ಡಿಸೋಜಾ ನಗರದ ಶಕ್ತಿನಗರದಲ್ಲಿ ವಾಸವಾಗಿದ್ದರು. ಮಹಾಮಳೆಯ ಕಾರಣ ಶಾಲಾ ಕಾಲೇಜುಗಳಿಗೆ 2 ದಿನ ರಜೆ ಇದ್ದ ಕಾರಣ ಶಾನೆಲ್ ಮನೆಯಲ್ಲಿಯೇ ಆಟವಾಡಿಕೊಂಡಿದ್ದಳು.

ಸಂದರ್ಭ ಶಾನೆಲ್ ಫ್ಲಾಟ್ ಬೆಡ್ ರೂಂ ಗೆ ತಾಗಿ ಕೊಂಡಿರುವ ವೆರಾಂಡದ ಗ್ರಿಲ್ಸ್ ಮೇಲೆ ಹತ್ತಿ ಸ್ಲೈಡರ್ ಕಿಟಕಿಯ ಮೂಲಕ ಕೆಳಕ್ಕೆ ಇಣುಕಲು ಯತ್ನಿಸುತ್ತಿದ್ದಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಶಾನೆಲ್ ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಶಾನೆಲ್ ಮೃತಪಟ್ಟಿದ್ದಾಳೆ.

ಘಟನೆಯ ಕುರಿತು ನಗರದ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಬೆಡ್ ರೂಂ ಕಿಟಕಿಗೆ ಸರಳುಗಳನ್ನು ಅಳವಡಿಸದಿರುವುದೇ ಘಟನೆಗೆ ಕಾರಣವಾಗಿದ್ದು, ಫ್ಲಾಟ್ ಮಾಲೀಕರಾದ ವೀಣಾ ಎಲಿಸಾ ಸಲ್ಡಾನಾ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: