ಕರ್ನಾಟಕ

ಈಜಲು ಹೋದ ಬಾಲಕ ಸಾವು

ಬೆಂಗಳೂರು,ಮೇ.31: ಕೆರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಟ್ಟರಹಳ್ಳಿ ನಿವಾಸಿ ಪುನೀತ್ (14) ಮೃತ ವಿದ್ಯಾರ್ಥಿ. ನಿನ್ನೆ ಭಟ್ಟರಹಳ್ಳಿ ಸಮೀಪದ ಕಿತ್ತಗನೂರು ಗ್ರಾಮದ ಕೆರೆಯಲ್ಲಿ ಮೂವರು ಸ್ನೇಹಿತರೊಂದಿಗೆ ಈಜಲು ಕೆರೆಗಿಳಿದ ವೇಳೆ ಈಜು ಬಾರದೇ ಸಾವನಪ್ಪಿದ್ದಾನೆ. ಕೆರೆಯಿಂದ ಪುನೀತ್ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಈ ಘಟನೆ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಪಿ. ಎಸ್ )

Leave a Reply

comments

Related Articles

error: