ಕ್ರೀಡೆ

ಪ್ರೊ ಕಬಡ್ಡಿ ಲೀಗ್: ಯು ಮುಂಬಾ, ತೆಲುಗು ಟೈಟಾನ್ಸ್ ತಂಡ ಹೀಗಿದೆ

ಮುಂಬೈ,ಮೇ 31-ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಯು ಮುಂಬಾ ತಂಡ ಇದೇ ಮೊದಲ ಬಾರಿಗೆ ಅನೂಪ್ ಕುಮಾರ್ ಇಲ್ಲದೆ ಕಣಕ್ಕಿಳಿಯುತ್ತಿದೆ.

ಅಲ್ಲದೆ, ಮೊದಲ ದಿನದ ಹರಾಜಿನಲ್ಲಿ ಫಜಲ್ ಅಟ್ರಾಚಲಿ ಅವರನ್ನು 1 ಕೋಟಿಗೆ ಖರೀದಿಸುವ ಮೂಲಕ ಅಚ್ಚರಿ ಮೂಡಿಸಿರುವುದರ ಜತೆಗೆ ಪ್ರೊ. ಕಬಡ್ಡಿ ಇತಿಹಾಸದಲ್ಲೇ ಒಂದು ಕೋಟಿ ನೀಡಿ ಆಟಗಾರರನ್ನು ಖರೀದಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

ಯು ಮುಂಬಾ ತಂಡ: ರೀಟೈನ್ ಮಾಡಿಕೊಂಡ ಆಟಗಾರರು ಶಿವ್ ಓಂ, ಇ ಸುಭಾಷ್, ಸುರೀಂದರ್ ಸಿಂಗ್, ರೈಡರ್ಸ್ ನಲ್ಲಿ ಅಬೋಲ್ ಫಜಲ್, ಗೌರವ್ ಕುಮಾರ್, ಡಿಫೆಂಡರ್ಸ್ ನಲ್ಲಿ ಫಜಲ್ ಅಟ್ರಾಚಲಿ, ಹಡಿ ತಾಜಿಕ್, ಆಲ್ರೌಂಡರ್ಸ್ ನಲ್ಲಿ ಅನಂತ್ ಕುಮಾರ್, ಮೋಹಿತ್ ಬಲ್ಯಾನ್ ತಂಡದಲ್ಲಿದ್ದಾರೆ.

ತೆಲಗು ಟೈಟಾನ್ಸ್ ತಂಡ ರೈಡ್ ಮಷಿನ್ ಖ್ಯಾತಿಯ ರಾಹುಲ್ ಚೌಧರಿಯನ್ನು ಬರೋಬ್ಬರಿ 1.29 ಕೋಟಿ ರೂ.ಗೆ , ಅಬೋಜರ್ ಮಿಘಾನಿ 76 ಲಕ್ಷ ರೂ.ಗೆ ನೀಡಿ ಖರೀದಿಸಿದೆ.

ತೆಲುಗು ಟೈಟಾನ್ಸ್ ತಂಡ: ರೀಟೈನ್ ಮಾಡಿಕೊಂಡ ಆಟಗಾರರಲ್ಲಿ ವಿಶಾಲ್ ಭಾರದ್ವಾಜ್, ನಿಲೇಶ್ ಸಾಲುಂಕೆ, ಸೋಂಬೀರ್, ಮೊಹಸೇನ್ ಮೊಗ್ ಸೊದುಲ್ಫಿಜುರಿ, ರಕ್ಷಿತ್, ರೈಡರ್ಸ್ ನಲ್ಲಿ ರಾಹುಲ್ ಚೌಧರಿ, ಕಮಲ್ ಸಿಂಗ್, ಅಂಕಿತ್ ಬೆನಿವಾಲ್, ಆನಂದ್, ಡಿಫೆಂಡರ್ಸ್ ನಲ್ಲಿ ಫರ್ಹಾದ್ ರಹೀಮಿ ಮಿಲಾಗರ್ಧನ್, ಅಬೋಜರ್ ಮಿಘಾನಿ ಇದ್ದಾರೆ. (ಎಂ.ಎನ್)

Leave a Reply

comments

Related Articles

error: