ಮೈಸೂರು

ನಾಡೋಜ ಪುರಸ್ಕೃತ ಸರೋದ್ ವಾದಕ ಪಂ.ತಾರಾನಾಥ್ ಅವರಿಗೆ ಸುತ್ತೂರು ಮಠದಿಂದ ಸನ್ಮಾನ

ಮೈಸೂರು,ಮೇ.31 : ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡಲ್ಪಡು ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಪಡೆದ ಖ್ಯಾತ ಸರೋದ್ ವಾದಕ ಡಾ.ಪಂ.ರಾಜೀವ ತಾರಾನಾಥ್ ಅವರು ಪ್ರಶಸ್ತಿ ಸ್ವೀಕರಿಸಿದ ನಂತರ ಮೈಸೂರಿನ ಸುತ್ತೂರು ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದರು.

ಪ್ರಶಸ್ತಿ ಸ್ವೀಕರಿಸಿದ ಈ ಸಂದರ್ಭದಲ್ಲಿ ಸುತ್ತೂರಿನ ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ತಾರಾನಾಥ್ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರುಮಠ, ಕಾರ್ಯದರ್ಶಿ ಎಸ್.ಶಿವಕುಮಾರಸ್ವಾಮಿ, ಪ್ರೊ.ವಿ.ಕೆ.ನಟರಾಜ್, ನಿರ್ದೇಶಕರಾದ ಸುರೇಶ್ ಆರ್.ಪಾಟೀಲ್, ಪ್ರೊ.ಮೊರಬದ ಮಲ್ಲಿಕಾರ್ಜುನ, ಆರ್.ಮಹೇಶ್, ಕಲಾವಿದ ಹಿಮಾಂಶು ಮುಂತಾದವರು ಜೊತೆಯಾಗಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: