ದೇಶ

ಸಂಪಾದಕ ಚೋ ರಾಮಸ್ವಾಮಿ ಇನ್ನಿಲ್ಲ

ಪತ್ರಕರ್ತ, ರಾಜಕೀಯ ವಿಶ್ಲೇಷಕ, ಹಾಸ್ಯ ನಟ ಚೋ ರಾಮಸ್ವಾಮಿ(82) ಬುಧವಾರದಂದು ಬೆಳಗ್ಗೆ 4 ಗಂಟೆಗೆ ನಿಧನರಾದರು.

ಮಾಜಿ ಸಿಎಂ ದಿ. ಜಯಲಲಿತಾ ಅವರ ಹಿತೈಷಿಯೂ ಆಗಿದ್ದ ರಾಮಸ್ವಾಮಿ ಅನಾರೋಗ್ಯಕ್ಕೀಡಾಗಿ ಹಲವು ದಿನಗಳಿಂದ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾಮಸ್ವಾಮಿ ಅವರ ಪಾರ್ಥಿವ ಶರೀರವನ್ನು ಚೆನ್ನೈನಲ್ಲಿರುವ ಅವರ ಸ್ವಗೃಹಕ್ಕೆ ಸ್ಥಳಾಂತರಿಸಲಾಗಿದೆ.

ತುಘಲಕ್ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಚೋ ರಾಮಸ್ವಾಮಿ ಅವರು ಕಠಿಣ ರಾಜಕೀಯ ವಿಮರ್ಶೆಗಳಿಗೆ ಖ್ಯಾತಿ ಪಡೆದಿದ್ದರು. ಅವರು ನಟನೆಯಲ್ಲೂ ಖ್ಯಾತಿ ಪಡೆದಿದ್ದು, ಹಲವು ಧಾರಾವಾಹಿ, ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್, ಜಯಲಲಿತಾ, ಕಮಲ ಹಾಸನ್, ರಜನಿಕಾಂತ್ ಸೇರಿದಂತೆ ಹಲವು ಖ್ಯಾತ ನಟ-ನಟಿಯರೊಂದಿಗೆ ಚೋ.ರಾಮಸ್ವಾಮಿ ಅವರು ನಟಿಸಿದ್ದಾರೆ.

Leave a Reply

comments

Related Articles

error: