ಸುದ್ದಿ ಸಂಕ್ಷಿಪ್ತ

ವಿದ್ಯುತ್ ಹರಿಯುವಿಕೆಯಲ್ಲಿ ಎಚ್ಚರ ವಹಿಸಿ

ಮೈಸೂರು, ಜೂ.1:- ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ಪರಿಣಾಮಿಪುರ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ  1X8 ಎಂ.ವಿ.ಎ, 66/6.6 ಕೆ.ವಿ. ಉಪ ಕೇಂದ್ರಕ್ಕೆ  ನೂತನವಾಗಿ ನಿರ್ಮಿಸಿರುವ  66 ಕೆ.ವಿ. ಲಿಲೋ ಮಾರ್ಗವನ್ನು ದಿನಾಂಕ: 01-06-2018 ರಂದು ಅಥವಾ ನಂತರ ಯಾವುದೇ ದಿನಾಂಕದಂದು ಚೇತನಗೊಳಿಸಲಾಗುವುದು. (ವಿದ್ಯುತ್ ಹರಿಸಲಾಗುವುದು). ಸದರಿ 66 ಕೆ.ವಿ. ಲಿಲೋ ವಿದ್ಯುತ್ ಮಾರ್ಗವು ಪರಿಣಾಮಿಪುರ, ಹೊಳೆಸಾಲು, ಕಾಳೀಹುಂಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಹಾದುಹೋಗುತ್ತವೆ.
ಸಾರ್ವಜನಿಕರು ಗೋಪುರಗಳಿಗೆ ದನಕರುಗಳನ್ನು ಕಟ್ಟುವುದಾಗಲಿ, ಲೋಹದ ಪಟ್ಟಿಯನ್ನು ತೆಗೆಯುವುದಾಗಲಿ, ಗೋಪುರಗಳನ್ನು ಹತ್ತುವುದಾಗಲಿ, ತಂತಿಗಳನ್ನು ಮುಟ್ಟುವುದಾಗಲಿ, ಗೋಪುರಗಳ ಕೆಳಗಡೆ ಮರಗಿಡಗಳನ್ನು ನೆಡುವುದಾಗಲಿ, ಗೋಪುರಗಳಿಗೆ ಬಳ್ಳಿ ಮತ್ತು ಹಗ್ಗ ಮುಂತಾದುವುಗಳನ್ನು ಎಳೆಯುವುದಾಗಲಿ, ಗಾಳಿಪಟವನ್ನು ಗೋಪುರದ ಹತ್ತಿರ ಹಾರಿಸುವುದಾಗಲಿ ಮಾಡುವುದು ತುಂಬಾ ಅಪಾಯಕಾರಿಯಾಗಿರುತ್ತದೆ ಹಾಗೂ ಪ್ರಾಣ ಹಾನಿಯಾಗುತ್ತದೆಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿರುತ್ತದೆ.
ಈ ಸೂಚನೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ ಉಂಟಾಗುವ ಯಾವುದೇ ತರಹದ ಅಪಘಾತ ಅಥವಾ ಪ್ರಾಣ ಹಾನಿಗೆ ಕರ್ನಾಟಕ ವಿದ್ಯುತ್ ಪ್ರಸರಣ  ನಿಗಮ ನಿಯಮಿತ ಜವಾಬ್ದಾರರಲ್ಲ ಎಂದು ಮಂಡ್ಯ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: