ಪ್ರಮುಖ ಸುದ್ದಿ

ಭಾರೀ ಮಳೆಯಿಂದ ಆ್ಯಂಬುಲೆನ್ಸ್ ಮೇಲೆ ಉರುಳಿ ಬಿದ್ದ ಮರ : ಮೂವರು ಗಂಭೀರ

ರಾಜ್ಯ(ಹಾಸನ)ಜೂ.1:-  ಭಾರೀ ಮಳೆಯಿಂದಾಗಿ  ಆ್ಯಂಬುಲೆನ್ಸ್ ಮೇಲೆ  ಮರ ಉರುಳಿ ಬಿದ್ದು ಮೂವರು ಗಂಭೀರ ಗಾಯಗೊಂಡ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನದ ಅರಸೀಕೆರೆ ತಾಲೂಕಿನ ಎನ್.ಹೆಚ್ 206 ಬಳಿ  ಈ ಘಟನೆ ನಡೆದಿದ್ದು,  ಅಂಬ್ಯುಲೆನ್ಸ್ ನಲ್ಲಿದ್ದ ಚಿಕ್ಕಮಗಳೂರು ಮೂಲದ ಮೂಕನಹಳ್ಳಿ ನಿವಾಸಿ ನಂಜುಂಡಪ್ಪ (65), ಈಶ್ವರಪ್ಪ (42), ಬಸವಾಪುರದ ನಿರ್ಮಲ(35)ಮತ್ತು ನಿಜಲಿಂಗಪ್ಪ ಗಂಭೀರ ಗಾಯಗೊಂಡಿದ್ದಾರೆ.  ಗಾಯಾಳುಗಳನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಅಂಬ್ಯುಲೆನ್ಸ್ ಹೊರಟಿತ್ತು. ಈ ವೇಳೆ ಜೋರು ಗಾಳಿ ಮಳೆಗೆ ಜೀವ ರಕ್ಷಕ ವಾಹನದ ಮೇಲೆ ಬೃಹತ್ ಬೇವಿನ ಮರ ಬಿದ್ದು ಈ ಅವಘಡ ಸಂಭವಿಸಿದೆ. ಜೆಸಿಬಿ ಯಂತ್ರದಿಂದ ಮರವನ್ನು ತೆರವುಗೊಳಿಸಲಾಗಿದ್ದು, ಘಟನಾ ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: