ಪ್ರಮುಖ ಸುದ್ದಿಮೈಸೂರು

ರೈತ ಸಾಲ ಮನ್ನಾ ವಿಷಯವಾಗಿ ಸರ್ಕಾರ ಸಂಪೂರ್ಣ ಸ್ಪಷ್ಟನೆಯನ್ನು ರಾಜ್ಯದ ಜನತೆಗೆ ನೀಡಲಿ: ಸರ್ಕಾರಕ್ಕೆ ಬಡಗಲಪುರ ನಾಗೇಂದ್ರ ಒತ್ತಾಯ

ಮೈಸೂರು,ಜೂ.1 : ಸಂಪೂರ್ಣ ಸಾಲ ಮನ್ನಾ ವಿಷಯದಲ್ಲಿ ಸರ್ಕಾರ ಸಕಾರವಾದ ಸ್ಪಷ್ಟನೆ ನೀಡದಿದ್ದರೆ ರೈತರನ್ನು ಬೇವರ್ಸಿಗಳಂತೆ ಸಮಾಜಕ್ಕೆ ಬಿಂಬಿಸಿದಂತಾಗಲಿದ್ದು, ಆದ್ದರಿಂದ ಸಾಲಮನ್ನಾ ವಿಷಯವಾಗಿ ಮೊದಲು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಸಾಲ ಮನ್ನಾ ಮಾಡುತ್ತೇವೆಂದು ಹೇಳಿಕೊಂಡು ನಮ್ಮ ಕಿವಿಗೆ ಹೂ ಇಡದೇ, ಯಾವ ಮಾನದಂಡದ ಮೇಲೆ ಸಾಲ ಮನ್ನಾ ಮಾಡುತ್ತಿದ್ದೀರಾ ಎಂದು ಮೊದಲು ರಾಜ್ಯದ ಜನತೆಗೆ ಮನವರಿಕೆ ಮಾಡಿ ಆನಂತರ ಕ್ರಮ ಕೈಗೊಳ್ಳುವುದು ಅವಶ್ಯ ಇಲ್ಲವಾದಲ್ಲಿ ತಾವುಗಳು ಬೇವರ್ಸಿಗಳಂತೆ ತಲೆತಗ್ಗಿಸುವಂತಾಗುವುದು ಎಂದರು.

ರೈತ ಸಾಲ ಮನ್ನಾ ವಿಚಾರವಾಗಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೊಂದಿಗೆ ನಡೆದ ಚರ್ಚೆಗೆ ಸಮಯಾವಕಾಶವಿಲ್ಲದೇ ಅಪೂರ್ಣಗೊಂಡಿದೆ ಎಂದು ರೈತರ ಸಾಲವನ್ನು ಯಾಕೆ ಮನ್ನಾ ಮಾಡುತ್ತೇವೆ ಎಂದು ಇದುವರೆಗೂ ಯಾವ ಪಕ್ಷಗಳು ಸಕಾರಣ ಸ್ಪಷ್ಟನೆ ನೀಡದೆ ಅನಗತ್ಯ ಸಾಲ ಮನ್ನಾ ಮಾಡುತ್ತೇವೆಂದು ರೈತರನ್ನು ಬೇವರ್ಸಿಗಳಂತೆ ಸಮಾಜದಲ್ಲಿ ಬಿಂಬಿಸಬಾರದು, ರೈತ ಸಾಲ ಮನ್ನಾಕ್ಕೆ ವಿರೋಧವಿಲ್ಲ ಆದರೆ ವೈಯುಕ್ತಿಕ ಅಭಿವೃದ್ಧಿಗಾಗಿ ಯಾವ ಸರ್ಕಾರಗಳು ಸಾಲ ನೀಡಿಲ್ಲ.

ಸಾಲ ಮನ್ನಾಕ್ಕೆ ನೂರೆಂಟು ನಿಬಂಧನೆಗಳನ್ನು ಮಾಡಿದ್ದು ಇದರಿಂದ ನೂರರಲ್ಲಿ ಒಬ್ಬರೋ ಇಬ್ಬರೋ ಫಲಾನುಭವಿಗಳಾಗುವರು ಆದ್ದರಿಂದ ಸಾಲ ಮನ್ನಾ ವಿಷಯದಲ್ಲಿ ಹೇರಿರುವ ನಿಬಂಧನೆಗಳನ್ನು ಸಡಿಲಗೊಳಿಸಿ ಬೇಷರತ್ತಿನಿಂದ ಎಲ್ಲಾ ರೈತರ ಸಾಲ ಮನ್ನಾ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸಿದರು.

ನ್ಯಾಯಾಲಯಗಳಲ್ಲಿರುವ ದಾವೆಗಳಿಗೂ ಸಾಲ ಮನ್ನಾ ಅನ್ವಯಿಸಲಿ, ಆಭರಣ ಮೇಲಿನ ಪಡೆದಿರುವ ಸಾಲವನ್ನು ಇದರ ವ್ಯಾಪ್ತಿಗೆ ಬರಬೇಕು, ಕೃಷಿ ಅಭಿವೃದ್ಧಿಗೆ ಪಡೆದಿರುವ ಮಧ್ಯಮ ಮತ್ತು ಧೀರ್ಘಾವದಿ ಸಾಲ, ಪಶು ಸಂಗೋಪನೆ ಪಡೆದುಕೊಂಡಿರುವ ಮಹಾನಗರ, ನಗರಸಭೆ ವ್ಯಾಪ್ತಿಯ ವಾಣಿಜ್ಯ ಬ್ಯಾಂಕ್ ಗಳ ಸಾಲವನ್ನು ಇದರ ವ್ಯಾಪ್ತಿಗೆ ಒಳಪಡಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.

ರಾಜ್ಯ ರೈತ ಮುಖಂಡರಾದ ಎಂ.ಎಸ್.ಅಶ್ವಥ್ ನಾರಾಯಣ್ ರಾಜ್ ಅರಸ್, ಹೆಚ್.ಸಿ.ಲೋಕೇಶ್ ರಾಜೇ ಅರಸ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: