ಕರ್ನಾಟಕಪ್ರಮುಖ ಸುದ್ದಿ

ಡಿಟೆಕ್ಟೀವ್ ಸಬ್’ಇನ್ಸ್’ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ

ಬೆಂಗಳೂರು (ಜೂನ್ 1): ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯು ಡಿಟೆಕ್ಟೀವ್ ಸಬ್ ಇನ್ಸ್’ಪೆಕ್ಟರ್ ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ : 12
> ಡಿಟೆಕ್ಟೀವ್ ಸಬ್ ಇನ್ಸ್’ಪೆಕ್ಟರ್ ಪುರುಷ – 10
> ಡಿಟೆಕ್ಟೀವ್ ಸಬ್ ಇನ್ಸ್’ಪೆಕ್ಟರ್ ಮಹಿಳಾ – 01
> ಡಿಟೆಕ್ಟೀವ್ ಸಬ್ ಇನ್ಸ್‍ಪೆಕ್ಟರ್ (ಹೈ-ಕ) – 01

ವಿದ್ಯಾರ್ಹತೆ: ಯು.ಜಿ.ಸಿಯಿಂದ ಮಾನ್ಯತೆ ಪಡೆದಿರುವ ಅಂಗಿಕೃತ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಅಥವಾ ಎಐಸಿಟಿಇ ಯಿಂದ ಮಾನ್ಯತೆ ಪಡೆದ ಇಂಜಿನಿಯರಿಂಗ್ / ತಂತ್ರಜ್ಞಾನದಲ್ಲಿ / ಕಂಪ್ಯೂಟರ್ ಅಪ್ಲಿಕೇಷನ್’ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯೋಮಿತಿ: ಕನಿಷ್ಠ 21 ವರ್ಷ ನಿಗದಿಮಾಡಲಾಗಿದೆ. ಗರಿಷ್ಠ ವಯಸ್ಸನ್ನು ಸಾಮಾನ್ಯ ವರ್ಗದವರಿಗೆ 28 ವರ್ಷ, ಪ.ಜಾ, ಪ.ಪಂ, ಹಿಂದುಳಿದ ವರ್ಗದವರಿಗೆ 30 ವರ್ಷ, ಸೇವಾನಿರತ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ಶುಲ್ಕ: ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 250 ರೂ, ಪ,ಜಾ, ಪ.ಪಂ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 100 ರೂ ಶುಲ್ಕ ನಿಗದಿಮಾಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-06-2018.

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.ksp.gov.in ನೋಡಬಹುದು. (ಎನ್.ಬಿ)

Leave a Reply

comments

Related Articles

error: