ಪ್ರಮುಖ ಸುದ್ದಿ

ಇನ್ಪೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ನಿವಾಸಕ್ಕೆ ಸಿ ಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ

ರಾಜ್ಯ(ಬೆಂಗಳೂರು)ಜೂ.1:- ಇನ್ಫೋಸಿಸ್ ಸಂಸ್ಥಾಪಕ  ನಾರಾಯಣ ಮೂರ್ತಿ ಅವರ ನಿವಾಸಕ್ಕೆ ಸಿ ಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿರುವ ನಾರಾಯಣ ಮೂರ್ತಿ  ಅವರ ನಿವಾಸಕ್ಕೆ  ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ  ಭೇಟಿ ನೀಡಿದ ವೇಳೆ ನಾರಾಯಣ ಮೂರ್ತಿ  ಅವರ ಜತೆ  ಮಹತ್ವದ ಮಾತುಕತೆ  ನಡೆಸಿ ಐಟಿ ಬಿಟಿ ಕ್ಷೇತ್ರದಲ್ಲಿ ಬಂಡವಾಳ ಆಕರ್ಷಿಸಲು ಸೂಕ್ತ ಸಲಹೆ ನೀಡುವಂತೆ ಮನವಿ ಮಾಡಿದರು.

ಸಿಎಂ ಆದ ಬಳಿಕ ಹೆಚ್ ಡಿ ಕುಮಾರಸ್ವಾಮಿ ಸತತ ಸಭೆಗಳ ಮೂಲಕ ಅಭಿವೃದ್ಧಿ ಪರ್ವಕ್ಕೆ ಭರದ ಸಿದ್ದತೆ ನಡೆಸುತ್ತಿದ್ದು,  ಮೊದಲು ರೈತರ ಸಭೆ, ನಂತರ ಉನ್ನತ ಅಧಿಕಾರಿಗಳ ಸಭೆ ಬಳಿಕ  ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇಂದು ನಾರಾಯಣ ಮೂರ್ತಿ ಅವರೊಂದಿಗೆ ಮಹತ್ವದ  ಸಭೆ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: