ಕರ್ನಾಟಕಮೈಸೂರು

ಮುಂದಿನ ರಾಜಕೀಯ ನಡೆಯ ಬಗ್ಗೆ ತಿಂಗಳಾತ್ಯಂತಕ್ಕೆ ಮಾಹಿತಿ: ವಿ. ಶ್ರೀನಿವಾಸ್ ಪ್ರಸಾದ್

ತಮ್ಮ ಮುಂದಿನ ರಾಜಕೀಯ ನಡೆಯನ್ನು ತಿಂಗಳಾತ್ಯಕ್ಕೆ ಪ್ರಕಟಿಸುವುದಾಗಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ಅವರು ನಂಜನಗೂಡಿನ ಕಡುಬಿನ ಕಟ್ಟೆ ಮೊರಾರ್ಜಿ ವಸತಿ ಶಾಲೆಯಲ್ಲಿ 2.88 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಾನು ರಾಜಕೀಯವಾಗಿ ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಚಾಮರಾಜನಗರದ ಸಂಸದ ಧ್ರುವನಾರಾಯಣ ನೀವು ರಾಜಕೀಯದಿಂದ ದೂರ ಉಳಿಯಬೇಡಿ. ಶಾಸಕ ಸ್ಥಾನದ ಅವಧಿ ಪೂರ್ಣಗೊಳಿಸಿ ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸಿ ಎಂದಿದ್ದಾರೆ.

ನನ್ನ ಹಿತೈಷಿಗಳು, ರಾಜಕೀಯ ಮುಖಂಡರು, ಆತ್ಮೀಯರೊಂದಿಗೆ ಚರ್ಚಿಸಿ ಮುಂದಿನ ನಡೆ ತಿಳಿಸುತ್ತೇನೆ ಎಂದರು.

ಈ ಶಾಲೆಯ ಕಟ್ಟಡದ ಮುಂದಿನ ಭಾಗದ ಕಾಮಗಾರಿಯ ವೇಳೆ ನಾನು ಶಾಸಕನಾಗಿ ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಸಮಾಜದಲ್ಲಿ ಶಿಕ್ಷಣದ ಕುರಿತು ಜಾಗೃತಿ ಮೂಡಿಸಬೇಕು. ರಾಜ್ಯ ಸರ್ಕಾರ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ತಿಳಿಸಿದರು.

ಸಂಸದ ಧ್ರುವನಾರಾಯಣ, ಶಾಲೆಯು ವಿಭಾಗ ವಲಯ, ಶಿಕ್ಷಕ ಸಿಬ್ಬಂದಿ, ಅಡುಗೆ ಮನೆ, ಆಟದ ಮೈದಾನಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.

Leave a Reply

comments

Related Articles

error: