ಸುದ್ದಿ ಸಂಕ್ಷಿಪ್ತ

ಜೂ.3. ನಾಲ್ವಡಿ ಕೃಷ್ಣರಾಜ ಒಡೆಯರ್ ವರ್ಧಂತೋತ್ಸವ ಪ್ರತಿಭಾ ಪುರಸ್ಕಾರ

ಮೈಸೂರು,ಜೂ.1 : ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವರ್ಧಂತೋತ್ಸವ ಅಂಗವಾಗಿ ನಮ್ಮ ಮೈಸೂರು ಫೌಂಡೇಷನ್ ಮತ್ತು ಅಗ್ರಗಣ್ಯ ಯುವಕರ ಸಂಘ ಸಂಯುಕ್ತಾಶ್ರಯದಲ್ಲಿ ಬಡ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರವನ್ನು ಜೂ.3ರಂದು ಆಯೋಜಿಸಿದೆ.

ನಗರದ ವಾರ್ಡ್ ನಂ.46ರಲ್ಲಿ ಇರುವ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳ ಸನ್ಮಾನ ಹಾಗೂ ನೋಟ್ ಪುಸ್ತಕ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: