ಮೈಸೂರು

ಜೆಎಸ್ಎಸ್ ವಿವಿಧ ವಿದ್ಯಾರ್ಥಿನಿಲಯಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಮೈಸೂರು,ಜೂ.1 : ಜೆಎಸ್ಎಸ್ ಮಹಾವಿದ್ಯಾಪೀಠ ನೇತೃತ್ವದಲ್ಲಿ  ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆಯುತ್ತಿರುವ ವಿವಿಧ ವಿದ್ಯಾರ್ಥಿ ನಿಲಯಗಳಿಗೆ, ಮಕ್ಕಳ ಕುಟೀರ, ಅನಾಥಾಲಯಗಳಿಗೆ 2018-19ನೇ ಸಾಲಿಗೆ ಪ್ರವೇಶ ಆರಂಭವಾಗಿದ್ದು ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಮೈಸೂರಿನ ಕೆ.ಎಸ್.ಎಸ್.ಅನಾಥಾಲಯ, ಕೆ.ಆರ್.ನಗರದ ಜೆಎಸ್ಎಸ್ ಅನಾಥಾಲಯ, ನಂಜನಗೂಡಿನ ಹುಲ್ಲಹಳ್ಳಿಯ ಜೆಎಸ್ಎಸ್ ಮಕ್ಕಳ ಕುಟೀರ, ತಿ.ನರಸೀಪುರದ ಜೆಎಸ್ಎಸ್ ವಿದ್ಯಾರ್ಥಿ ನಿಲಯಕ್ಕೆ, ಚಾಮರಾಜನಗರದ ಜೆಎಸ್ಎಸ್ ಅನಾಥಾಲಯ, ಗುಂಡ್ಲುಪೇಟೆ ತಾಲ್ಲೂಕಿನ ತೆರೆಕಣಾಂಬಿಯ ಜೆಎಸ್ಎಸ್ ಅನಾಥಾಲಯ, ಚಾಚಹಳ್ಳಿ, ವಡ್ಡಗೆರೆ ಹಾಗೂ ಶಿವಪುರದ ಶ್ರೀ ಬಸವೇಶ್ವರ ಅನಾಥಾಲಯಗಳು, ಕೊಳ್ಳೇಗಾಲದ ರಾಮಾಪುರದ ಜೆಎಸ್ಎಸ್ ಖಾಸಗಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥನಿಲಯ, ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕಾಡನೂರು ಜೆಎಸ್ಎಸ್ ಅನಾಥಾಲಯಕ್ಕೆ ಪ್ರವೇಶ ಬಯಸುವವರು ಜೂ.10ರೊಳಗೆ ನಿಲಯ ಪಾಲಕರಿಗೆ ಅರ್ಜಿ ಸಲ್ಲಿಸಬಹುದು, ಊಟ ವಸತಿ ಸೇರಿದಂತೆ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದು ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: