ದೇಶ

ಭಾರತ ಪ್ರವೇಶಿಸಿದ್ದಾರಂತೆ 12 ಮಂದಿ ಜೈಶ್- ಎ-ಮೊಹಮದ್ ಸಂಘಟನೆಯ ಭಯೋತ್ಪಾದಕರು

ದೇಶ(ನವದೆಹಲಿ)ಜೂ.2:-  ದೆಹಲಿ ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯವೆಸಗುವ ದುರುದ್ದೇಶದೊಂದಿಗೆ ಸುಮಾರು 12 ಮಂದಿ ಜೈಶ್​-​ ಎ-ಮೊಹಮದ್​ ಸಂಘಟನೆಯ ಭಯೋತ್ಪಾದಕರು ಜಮ್ಮು ಕಾಶ್ಮೀರದ ಮೂಲಕ ಭಾರತ ಪ್ರವೇಶಸಿದ್ದಾರೆ ಎನ್ನಲಾಗಿದ್ದು ಕಟ್ಟೆಚ್ಚರ ವಹಿಸುವಂತೆ ಎರಡೂ ರಾಜ್ಯಗಳ ಭದ್ರತಾ ಸಿಬ್ಬಂದಿಗೆ ಸೂಚನೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತ ಪ್ರವೇಶಿಸಿರುವ ಉಗ್ರರು ತಂಡಗಳಾಗಿ ವಿಂಗಡಣೆಗೊಂಡಿದ್ದು, ಪ್ರತ್ಯೇಕವಾಗಿ ದಾಳಿ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಲ್ಲದೆ, ಭಾರಿ ಪ್ರಮಾಣದಲ್ಲಿ ದುಷ್ಕೃತ್ಯವೆಸಗುವ ಮುನ್ಸೂಚನೆಗಳಿವೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರಂತೆ. ಇಸ್ರೇಲ್​ನಲ್ಲಿ ಉಗ್ರಗಾಮಿಗಳು ಅನುಸರಿಸುವ ಫಿದಾಯಿನ್​ ಎಂಬ ಗೆರಿಲ್ಲಾ ಮಾದರಿಯ ದಾಳಿ ಹಾಗೂ ಸೈನಿಕರು ಮತ್ತು ಅವರ ಬಿಡಾರಗಳ ಮೇಲೆ ಹಿಟ್​ & ರನ್​ ಮಾದರಿಯ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಇನ್ನು 2-3 ದಿನಗಳಲ್ಲಿ ಈ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಭದ್ರತಾ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್​ಐ ವರದಿ ಮಾಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: