ಮನರಂಜನೆಮೈಸೂರು

ಅಮವಾಸೆ ಸ್ನೇಹ v/s ಪ್ರೀತಿ ವಿಷಯಾಧಾರಿತವಾಗಿದೆ

‘ಅಮವಾಸೆ’ ಚಿತ್ರ ಸ್ನೇಹ v/s ಪ್ರೀತಿ ಎಂಬ ವಿಷಯಾಧಾರಿತ ಚಿತ್ರವಾಗಿದೆ ಎಂದು ನಿರ್ದೇಶಕ ಡಾ. ಚಂದ್ರಶೇಖರ್ ಹೇಳಿದರು.

ಮೈಸೂರಿನಲ್ಲಿ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಮವಾಸೆ ಚಿತ್ರವು ಯುವ ಪ್ರತಿಭೆಗಳ ಹೊಸ ಆಯಾಮವುಳ್ಳ ಚಿತ್ರವಾಗಿದೆ ಎಂದು ಹೇಳಿದರು.

ಮಡಿಕೇರಿ ಮತ್ತು ಮೈಸೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸುಮಾರು 1 ಗಂಟೆ 45 ನಿಮಿಷವುಳ್ಳ ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿವೆ. ಇನ್ನು ಸ್ವಲ್ಪ ದಿನಗಳಲ್ಲಿ ಚಿತ್ರ ನಿರ್ಮಾಣ ಮುಗಿಯಲಿದ್ದು, ಜನವರಿ ತಿಂಗಳಲ್ಲಿ ತೆರೆಕಾಣಲಿದೆ. ಅಮವಾಸೆ ಎಂದರೆ, ಆ ಚಿತ್ರದಲ್ಲಿ ನಟಿಸಿರುವ ಅಮರ್, ಮಹೇಶ್, ವಾಸು ಮತ್ತು ಸೆಂದಿ. ಈ ನಾಲ್ಕು ಹುಡುಗರ ಹೆಸರನ್ನು ಆಧಾರವಾಗಿಟ್ಟುಕೊಂಡು ಚಿತ್ರಕ್ಕೆ ಟೈಟಲ್ ನೀಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪ್ರಶಾಂತ್, ಜಗದೀಶ್, ಮಂಜು ಕವಿ, ಹರಿಬಾಬು, ನಾಯಕಿ ಧರಿಣಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: