
ಕರ್ನಾಟಕ
ಅಪಘಾತ: ಕಬಡ್ಡಿ ಕ್ರೀಡಾಪಟು ಸಾವು
ಉಡುಪಿ,ಜೂ.2-ಬೈಕಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟುವೊಬ್ಬರು ಸಾವನ್ನಪ್ಪಿರುವ ಘಟನೆ ತೆಂಕ ಎರ್ಮಾಳು ಎಂಬಲ್ಲಿ ನಡೆದಿದೆ.
ಎರ್ಮಾಳು ನಿವಾಸಿ ಸುಜೀತ್ (21) ಮೃತ ಕ್ರೀಡಾಪಟು. ಸುಜೀತ್ ರಾಷ್ಟ್ರೀಯ ಕಬಡ್ಡಿ ಕೂಟಗಳಲ್ಲಿ ಭಾಗವಹಿಸಿ ಗುರುತಿಸಿಕೊಂಡಿದ್ದರು. (ಎಂ.ಎನ್)