ಕರ್ನಾಟಕಮೈಸೂರು

ರಾಮನಗರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮೈಸೂರಿನ ಹೆಣ್ಣುಮಗಳು ಬಲಿ

ಮೈಸೂರು,ಜೂ.2:- ರಾಮನಗರದ ಪತಿಯ ಮನೆಯಲ್ಲಿ ಮೈಸೂರಿನ ಹೆಣ್ಣುಮಗಳೋರ್ವಳು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಘಟನೆ ನಡೆದಿದೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ಗಂಧನಹಳ್ಳಿಯ ಗಂಧನಹಳ್ಳಿ ಸುಮಿತ್ರಮ್ಮ ನಾಗರಾಜೇಗೌಡರ ಪುತ್ರಿ ಹರ್ಷಿತಾರನ್ನು ಕಳೆದ 6 ತಿಂಗಳ ಹಿಂದಷ್ಟೇ ರಾಮನಗರದ ದೇವರಹಳ್ಳಿ ನಿವಾಸಿ ಬಿ.ಇ. ಪದವೀಧರ ಹರ್ಷಿತ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಈಕೆ ಎಂ.ಎ. ಬಿಇಡಿ ಪದವೀಧರೆಯಾಗಿದ್ದು, ವರದಕ್ಷಿಣೆ ಜೊತೆ ಕೆ.ಆರ್.ನಗರದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಮೂರು ತಿಂಗಳಿಗೆ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬಂದಿತ್ತು. ತಡರಾತ್ರಿ ದೇವರಹಳ್ಳಿಯಲ್ಲಿನ ಪತಿ ಮನೆಯಲ್ಲಿ  ಹರ್ಷಿತಾ ಮೃತದೇಹ ಪತ್ತೆಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಕಂಡು ಬಂದಿದ್ದು, ವಿಷದ ಮಾತ್ರೆ ನೀಡಿ ತನ್ನ ಮಗಳನ್ನು ಕೊಲೆ ಮಾಡಿದ್ದಾರೆಂದು ಹರ್ಷಿತಾ ಪೋಷಕರು ಆರೋಪಿಸಿದ್ದಾರೆ. ಬಲವಂತವಾಗಿ ವಿಷದ ಮಾತ್ರೆ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹರ್ಷಿತಾ ಸಾವನ್ನಪ್ಪಿದ ಬಳಿಕ ಪತಿ, ಮಾವ ಅತ್ತೆ ಸ್ಥಳದಿಂದ ಪರಾರಿಯಾಗಿದ್ದಾರೆ. ಪತಿ ಹರ್ಷಿತ್, ಮಾವ ರಾಮಕೃಷ್ಣಯ್ಯ, ಅತ್ತೆ ಸರೋಜಮ್ಮ ಮೇಲೆ ಕೊಲೆ ಆರೋಪ ಕೇಳಿ ಬಂದಿದ್ದು, ಸ್ಥಳಕ್ಕೆ ಚನ್ನಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತಿ ಹೃಷಿತ್ ಕುಟುಂಬಸ್ಥರನ್ನು ಬಂಧಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: