ಮೈಸೂರು

ಕೆಲಸ ಸಿಗದ ಕಾರಣ ಇಂಜಿನಿಯರಿಂಗ್ ಮುಗಿಸಿದ ಯುವಕ ಆತ್ಮಹತ್ಯೆ

ಮೈಸೂರು,ಜೂ.2:- ಸರಿಯಾದ ಕೆಲಸ ಸಿಗದ ಕಾರಣ ಇಂಜಿನಿಯರಿಂಗ್ ಮುಗಿಸಿದ ಯುವಕನೋರ್ವ ನೇಣಿಗೆ ಶರಣಾದ ಘಟನೆ ದಟ್ಟಗಳ್ಳಿಯಲ್ಲಿ ನಡೆದಿದೆ.

ದಟ್ಟಗಳ್ಳಿ ನಿವಾಸಿ ನವೀನ್(35) ಇಂಜಿನಿಯರಿಂಗ್ ಮುಗಿಸಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆ ಕೆಲಸ ಬಿಟ್ಟು ಬೇರೆ ಕೆಲಸಕ್ಕಾಗಿ ಅಲೆಯುತ್ತಿದ್ದ. ಆದರೆ ಎಲ್ಲಿಯೂ ಸರಿಯಾದ ಕೆಲಸ ಸಿಗದ ಕಾರಣ ತನ್ನ ಮನೆಯ ಮಹಡಿಯ ಮೇಲಿರುವ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಎಷ್ಟು ಹೊತ್ತಾದರೂ ಬಾರದ ಕಾರಣ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕುವೆಮಪುನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: