ಮೈಸೂರು

ಹೊಸ ಪ್ರಾಜೆಕ್ಟ್ ಆರಂಭ

ಸಿ.ಎಸ್.ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಹಾಸ್ಪಿಟಲ್ ಐಸಿಯು ಮತ್ತು ವಾರ್ಡ್ ಗಳನ್ನೊಳಗೊಂಡ ಓಟಿ ಕಾಂಪ್ಲೆಕ್ಸ್ ನ್ನು ನಿರ್ಮಿಸಲು ಹೊಸ ಪ್ರಾಜೆಕ್ಟ್ ನ್ನು ಪ್ರಾರಂಭಿಸುತ್ತಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ.ಕರಟ್ ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಯೋಜನೆಯ ಅಂದಾಜು ವೆಚ್ಚ ಸುಮಾರು 3 ಕೋಟಿಯಾಗಲಿದ್ದು, ನಿಧಿ ಸಂಗ್ರಹಕ್ಕಾಗಿ ಟೊಕ್ಕಟ ಮ್ಯೂಸಿಕಲ್ ಪ್ರೊಡಕ್ಷನ್ ವತಿಯಿಂದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಫೆಬ್ರವರಿ 18 ರಂದು ‘ಸಂಗೀತ ಸಂಜೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಸುನಿಲ್, ದೇವಿಕ್ ಮನೋಹರ್ ಮತ್ತು ಡಾ.ಡೇವಿಡ್ ಕ್ರಿಸ್ಟೋಪರ್ ಹಾಜರಿದ್ದರು.

Leave a Reply

comments

Related Articles

error: