ಕರ್ನಾಟಕಮೈಸೂರು

ಮ್ಯಾರಥಾನ್ ಗೆ ಉತ್ತಮ ಸ್ಪಂದನೆ

ಮೈಸೂರು – ಎ ಸ್ಪೋರ್ಟ್ಸ್ ಮ್ಯಾನೇಜ್ ಮೆಂಟ್ ಹಾಗೂ ಲೈಫ್ ಈಸ್ ಕಾಲಿಂಗ್ ಸಂಸ್ಥೆ ವತಿಯಿಂದ ನಗರದಲ್ಲಿ ಹಾಫ್ ಮ್ಯಾರಥಾನ್ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಹಾಫ್ ಮ್ಯಾರಥಾನ್ (21 ಕಿಮೀ) 10 ಕಿಮೀ ಹಾಗೂ 6 ಕಿಮೀ ಓಟದ ಸ್ಪರ್ಧೆಯನ್ನು ಒಳಗೊಂಡಿತ್ತು.

ಕೋಟೆ ಆಂಜನೇಯ ದೇವಸ್ಥಾನದ ಬಳಿ ಜಿಲ್ಲಾಧಿಕಾರಿ ಡಿ.ರಣದೀಪ್ ಮತ್ತು ಪೊಲೀಸ್ ಆಯುಕ್ತ ಬಿ. ದಯಾನಂದ ಮ್ಯಾರಥಾನ್ ಗೆ ಚಾಲನೆ ನೀಡಿದರು.

ಸುಮಾರು 2000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. 16ರಿಂದ 65ರ ವಯೋಮಿತಿಯವರೆಲ್ಲರೂ ಪಾಲ್ಗೊಂಡಿದ್ದರು.

ನಾಗರಿಕರಲ್ಲಿ ಜೀವನ ಶೈಲಿಯನ್ನು ಉತ್ತೇಜಿಸುವುದೇ ಕಾರ್ಯಕ್ರಮದ ಉದ್ದೇಶವಾಗಿತ್ತು. ಕೆ.ಆರ್. ವೃತ್ತ, ದೇವರಾಜು ಅರಸು ರಸ್ತೆ, ಹುಣಸೂರು ರಸ್ತೆ, ಮೆಟ್ರೋಪೋಲ್ ವೃತ್ತ, ಎಸ್.ಜೆ.ಸಿ.ಇ. ಪ್ರಿಮೀಯರ್ ಸ್ಟುಡಿಯೋ ವೃತ್ತ, ವಾಕ್ ಮತ್ತು ಶ್ರವಣ ಸಂಸ್ಥೆ, ಮಾನಸಗಂಗೋತ್ರಿಯಿಂದ ಸಾಗಿ ಚಾಮರಾಜ ಡಬ್ಬಲ್ ರಸ್ತೆಯಯನ್ನು ತಲುಪಿದರು.

Leave a Reply

comments

Related Articles

error: