ಮೈಸೂರು

ಸರ್ಕಾರಿ ಹಣ ದುರ್ಬಳಕೆ: ಸತ್ಯನಾರಾಯಣ ಆರೋಪ

ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ಮತ್ತು ಹಿರಿಯ ಉಪನ್ಯಾಸಕರು ಸರ್ಕಾರಿ ಹಣ ದುರ್ಬಳಕೆ ಮಾಡಿ ವಂಚನೆ ಎಸಗಿದ್ದಾರೆ ಎಂದು ಸತ್ಯನಾರಾಯಣ ಆರ್.ಎನ್. ಆರೋಪಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ವಂಚನೆ ಮಾಡಿರುವವರನ್ನು KCSR ನಿಯಮಾನುಸಾರ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ಕೋರಿದರು. ಕೆಪಿಎಸ್ಎಸಿ ಕಟ್ಟಡ ಬಾಡಿಗೆಗೆಂದು ಬಿಡುಗಡೆ ಮಾಡಲಾಗಿದ್ದ ಉದ್ದೇಶಿತ ಅನುದಾನ ಹಣ 18 ಸಾವಿರ ರೂ.ಗಳನ್ನು ಗುಳುಂ ಮಾಡಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿಕೆ ನಂತರ ನಕಲಿ ಬಿಲ್ಲುಗಳನ್ನು ಸೃಷ್ಟಿಸಿರುವುದಲ್ಲದೇ, ಉದ್ದೇಶಿತ ಕಟ್ಟಡ ಬಾಡಿಗೆ ಹಣ ಬಳಕೆ ಆಗದಿದ್ದಲ್ಲಿ ಕಾಲೇಜು ನಿರ್ವಹಣೆಗೆ ಅನುಮತಿ ನೀಡಲಾಗದೆಂದು ಆಯೋಗ ತಿಳಿಸಿದ ನಂತರ ಬೇರೆ ದಾರಿ ಕಾಣದೇ ಹಣ ಹಿಂತಿರುಗಿಸಿದ್ದಾರೆ ಎಂದು ದೂರಿದರು.

ಪ್ರಾಂಶುಪಾಲ ಟಿ.ಆರ್. ಸಿದ್ದರಾಜು ಮತ್ತು ಉಪನ್ಯಾಸಕ ಎ. ರಾಮೇಗೌಡ ಇವರಿಬ್ಬರನ್ನು ಕೂಡಲೇ ಇಲಾಖಾ ತನಿಖೆಯನ್ನು ಕಾಯ್ದಿರಿಸಿ ಅಮಾನತು ಮಾಡಬೇಕಾಗಿ ಒತ್ತಾಯಿಸಿದರು. ಅಲ್ಲದೇ ಸರ್ಕಾರಿ ಹಣ ದುರುಪಯೋಗ ಆಗಿದ್ದಲ್ಲಿ ಸರ್ಕಾರಿ ಸೇವೆಯಿಂದ ಕಡ್ಡಾಯ ನಿವೃತ್ತಿ ದಂಡನೆಯನ್ನು ವಿಧಿಸಬೇಕೆಂದು ಆಗ್ರಹಿಸಿದರು.

Leave a Reply

comments

Related Articles

error: