ದೇಶ

ಐಪಿಎಲ್ ಬೆಟ್ಟಿಂಗ್ ನಡೆಸಿರುವುದು ನಿಜ: ಅರ್ಬಾಝ್ ಖಾನ್

ಮುಂಬೈ,ಜೂ.2-ಐಪಿಎಲ್ ನಲ್ಲಿ ಬೆಟ್ಟಿಂಗ್ ನಡೆಸಿರುವುದಾಗಿ ನಟ-ನಿರ್ಮಾಪಕ ಅರ್ಬಾಝ್ ಖಾನ್ ಒಪ್ಪಿಕೊಂಡಿದ್ದಾರೆ ಎಂದು ಥಾಣೆ ಅಪರಾಧ ಪತ್ತೆ ವಿಭಾಗದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬುಕ್ಕಿ ಸೋನು ಜಲಾನ್ ನೀಡಿದ ಮಾಹಿತಿ ಮೇರೆಗೆ ಅರ್ಬಾಝ್ ಖಾನ್ ಗೆ ಮುಂಬೈನ ಥಾಣೆ ಪೊಲೀಸರು ಅರ್ಬಾಝ್ ಖಾನ್ ಗೆ ತಕ್ಷಣವೇ ವಿಚಾರಣೆಗೆ ಹಾಜರಾಗಬೇಕೆಂದು ಶುಕ್ರವಾರ ಸಮನ್ಸ್ ಜಾರಿ ಮಾಡಿದ್ದರು.

ಹೀಗಾಗಿ ಇಂದು ಥಾಣೆ ಪೊಲೀಸ್ ಠಾಣೆಗೆ ಖುದ್ದಾಗಿ ಬಂದ ಅರ್ಬಾಝ್ ಖಾನ್ ಬೆಟ್ಟಿಂಗ್ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅರ್ಬಾಝ್ ಖಾನ್ರನ್ನು ಬೆಟ್ಟಿಂಗ್ ಪ್ರಕರಣದಲ್ಲಿ ಹಿಂದೆಯೇ ಬಂಧಿತನಾಗಿರುವ ಬುಕ್ಕಿ ಸೋನು ಜಲಾನ್ ಎದುರು ಹಾಜರುಪಡಿಸಲಾಯಿತು. ಅರ್ಬಾಝ್ ಹೇಳಿಕೆಯ ಧ್ವನಿಮುದ್ರಿಸಿಕೊಳ್ಳಲು ಥಾಣೆ ಪೊಲೀಸರು ನಿರ್ಧರಿಸಿದ್ದಾರೆ.

ಅಪರಾಧ ಪತ್ತೆ ವಿಭಾಗದ ಪೊಲೀಸರು ಮುಂಬೈನಲ್ಲಿ ಮೇ 15 ರಂದು ಬೆಟ್ಟಿಂಗ್ ಜಾಲ ಬೇಧಿಸಿದ್ದು ಸೋನು ಜಲಾನ್ ಅಲಿಯಾಸ್ ಸೋನು ಮಲಾಡ್ ಸಹಿತ ನಾಲ್ವರನ್ನು ಬಂಧಿಸಿದ್ದರು. ಪೊಲೀಸರ ತನಿಖೆಯ ವೇಳೆ ಅರ್ಬಾಝ್ ಹಾಗೂ ಸೋನು ನಡುವೆಸಂಪರ್ಕವಿರುವುದು ಪತ್ತೆಯಾಗಿದೆ. ತಾವಿಬ್ಬರೂ ಐದು ವರ್ಷಗಳಿಂದ ಪರಿಚಿತರು ಎಂದು ಅರ್ಬಾಝ್ ಹಾಗೂ ಸೋನು ಒಪ್ಪಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮ ಹೇಳಿದ್ದಾರೆ. (ಎಂ.ಎನ್)

Leave a Reply

comments

Related Articles

error: