ಕರ್ನಾಟಕ

ಲಾರಿ, ತೂಫಾನ್ ನಡುವೆ ಡಿಕ್ಕಿ: ಇಬ್ಬರ ಸಾವು

ಕಾರವಾರ,ಜೂ.02: ಲಾರಿ ಮತ್ತು ತೂಫಾನ್ ವಾಹನದ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ರಾಗಿಹೊಸಳ್ಳಿ ಬಳಿಯ ದೇವಿಮನೆ ಘಾಟ್ ನಲ್ಲಿ ಘಟನೆ ನಡೆದಿದೆ.

ಗದಗ ಜಿಲ್ಲೆಯ ರೋಣ ಮೂಲದ ರಮೇಶ್ ಮತ್ತು ಕೃಷ್ಣ ಬಾಯಿ ಮೃತ ದುರ್ದೈವಿಗಳು. ಗದಗ ಜಿಲ್ಲೆಯ ರೋಣದಿಂದ ಗೋಕರ್ಣಕ್ಕೆ 12 ಜನ ಪ್ರವಾಸಕ್ಕೆ ಹೋಗಿ ಶಿರಸಿಗೆ ತೆರಳುವ ವೇಳೆ ದೇವಿಮನೆ ಘಾಟ್ ನ ತಿರುವಿನಲ್ಲಿ ಶಿರಸಿ ಭಾಗದಿಂದ ಬಂದ ಲಾರಿ ನೇರ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸಮೀಪದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ( ಪಿ. ಎಸ್ )

Leave a Reply

comments

Related Articles

error: