ಮೈಸೂರು

ನಿಶ್ಚಿತಾರ್ಥವಾಗಿದ್ದ ಯೋಧ ಅನುಮಾನಾಸ್ಪದವಾಗಿ ಸಾವು

ಮೊನ್ನೆಯಷ್ಟೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡ ಯೋಧನೋರ್ವ ಎದೆನೋವು ಎಂದು ಆಸ್ಪತ್ರೆಗೆ ದಾಖಲಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೆ.ಆರ್. ನಗರ ತಾಲೂಕಿನ ಕನಗನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

ಮೃತ ಯೋಧರನ್ನು ಪ್ರತೀಪ್(28) ಎಂದು ಗುರುತಿಸಲಾಗಿದೆ. ಪ್ರತೀಪ್ ಜಮ್ಮು-ಕಾಶ್ಮೀರದ ಲಡಾಕ್‌‌‌ನಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದರು. 2008ರಲ್ಲಿ ಸೇನೆಗೆ ಸೇರಿದ್ದ ಪ್ರತೀಪ್, ಡಿಸೆಂಬರ್ 12 ರಂದು ಮದುವೆ ಮಾಡಿಕೊಳ್ಳಲು ಊರಿಗೆ ಬಂದಿದ್ದರು. ಡಿಸೆಂಬರ್ 4ರಂದು ಇಲವಾಲ ಹೋಬಳಿಯ ಚೆನ್ನಹಳ್ಳಿ ಗ್ರಾಮದ ಯುವತಿಯೊಂದಿಗೆ  ಇವರ ನಿಶ್ಚಿತಾರ್ಥವಾಗಿತ್ತು.

ಆದರೆ ಮಂಗಳವಾರ ಎದೆ ನೋವು ಎಂದು ಕೆ.ಆರ್. ನಗರ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಸಂಜೆ ಮೈಸೂರಿಗೆ ಕರೆ ತರುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪ್ರತೀಪ್ ತಂದೆ, ಕೆ.ಆರ್. ನಗರ ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯೋಧನ ಮರಣೋತ್ತರ ಪರೀಕ್ಷೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Leave a Reply

comments

Related Articles

error: