ಮೈಸೂರು

ಗ್ರಾ. ಪಂ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ : ಮದ್ಯಮಾರಾಟ ನಿಷೇಧ

ಮೈಸೂರು, ಜೂ.2:- ಮೈಸೂರು ಜಿಲ್ಲೆಯ 14 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 14 ಸದಸ್ಯ ಸ್ಥಾನಗಳಿಗೆ ಹಾಗೂ  ಒಂದು ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ  ದಿನಾಂಕ 14-06-2018 ರಂದು ನಡೆಯಲಿದೆ. ಚುನಾವಣಾ ನೀತಿ ಸಂಹಿತೆಯು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಾಂಕ 30-05-2018 ರಿಂದ 17-06-2018 ರವರೆಗೆ ಜಾರಿಯಲ್ಲಿರಲಿದೆ.

ಮೈಸೂರು ತಾಲೂಕಿನ ರಮ್ಮನಹಳ್ಳಿ, ಸಿದ್ದಲಿಂಗಪುರ, ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ, ಕುರಿಹುಂಡಿ, ಟಿ. ನರಸೀಪುರ ತಾಲೂಕಿನ ಬಿ.ಶೆಟ್ಟಿಹಳ್ಳಿ, ಮೂಗೂರು, ವಾಟಾಳು, ಬಿ.ಸಿ.ಹಳ್ಳಿ, ಹುಣಸೂರು ತಾಲೂಕಿನ ಗೋವಿಂದನಹಳ್ಳಿ, ಚಿಲ್ಕುಂದ, ಗುರುಪುರ, ಕೆ.ಆರ್.ನಗರ ತಾಲೂಕಿನ ಅರ್ಜುನಹಳ್ಳಿ, ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ, ಹೆಚ್.ಡಿ.ಕೋಟೆ ತಾಲೂಕಿನ ಹೀರೇಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 14 ಸದಸ್ಯ ಸ್ಥಾನಗಳಿಗೆ ಹಾಗೂ ಹುಣಸೂರು ತಾಲೂಕಿನ 31-ಹನಗೋಡು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಚುನಾವಣೆಯನ್ನು ಘೋಷಿಸಲಾಗಿರುತ್ತದೆ. ಈ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಾಂಕ 30-05-2018 ರಿಂದ 17-06-2018 ರವರೆಗೆ ಮದ್ಯಪಾನ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ಆದೇಶ ಹೊರಡಿಸಿದ್ದಾರೆ.

ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ದಿನಾಂಕ  30-05-2018 ರಿಂದ 17-06-2018 ರವರೆಗೆ ಮುಚ್ಚುವಂತೆ ಮತ್ತು ಮೊಹರು ಮಾಡಿ ಅದರ ಕೀಯನ್ನು ಸಂಬಂಧಪಟ್ಟ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ ಅವರ ವಶಕ್ಕೆ ಅಬಕಾರಿ ಉಪ ಆಯುಕ್ತರು ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: