ಪ್ರಮುಖ ಸುದ್ದಿಮೈಸೂರು

ಪ್ರೌಢಶಾಲಾ ಮಟ್ಟಕ್ಕೆ ಎನ್ ಎಸ್ ಎಸ್ ಯೋಜನೆಗಳನ್ನು ವಿಸ್ತರಿಸಲು ಚಿಂತನೆ ನಡೆಸಲಾಗಿದೆ : ಪ್ರಮೋದ್ ಮಧ್ವರಾಜ್

ಹಿಂದೆ ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಮಾಹಿತಿಯ ಕೊರತೆ ಎದುರಾಗುತ್ತಿತ್ತು. ಆದರೆ ಇಂದು ಆಧುನಿಕತೆ ವೇಗವಾಗಿ ಬೆಳೆಯುತ್ತಿದ್ದು ಎಲ್ಲವೂ ಬೆರಳ ತುದಿಯಲ್ಲೇ ಸಿಗಲಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಲು ಶ್ರಮಿಸಬೇಕು ಎಂದು ಯುವ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ವಿಜ್ಞಾನ ಇತಿಹಾಸ ಕೇಂದ್ರದ ಆರ್ಯಭಟ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಎನ್.ಎಸ್.ಎಸ್-ಇಟಿಐ 13ನೇ ತರಬೇತಿ ಕಾರ್ಯಕ್ರಮವನ್ನು ಪ್ರಮೋದ್ ಮಧ್ವರಾಜ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರ ಅಂತರ್ಜಾಲದ ಮೂಲಕ ಜಾರಿಗೆ ತರುವ ಯೋಜನೆಗಳನ್ನು ಸುಲಭವಾಗಿ ಅನುಷ್ಠಾನಗೊಳಿಸಬಹುದು. ಅವುಗಳ ಕುರಿತು ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರ ಪ್ರೌಢಶಾಲಾ ಮಟ್ಟಕ್ಕೆ ರಾಷ್ಟ್ರೀಯ ಸೇವಾ ಯೋಜನೆಗಳನ್ನು ವಿಸ್ತರಿಸಲು ಚಿಂತನೆ ನಡೆಸಿದೆ. ಮೂರೂವರೆ ಲಕ್ಷವಿರುವ ಶಿಬಿರಾರ್ಥಿ ಸದಸ್ಯರ ಸಂಖ್ಯೆಯನ್ನು ಹತ್ತು ಲಕ್ಷಕ್ಕೇರಿಸಬೇಕೆನ್ನುವ ಉದ್ದೇಶದಿಂದ ಹೈಸ್ಕೂಲ್ ಮಟ್ಟದಲ್ಲೂ ಎನ್.ಎಸ್.ಎಸ್ ವಿಸ್ತರಿಸಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಇನ್ನಷ್ಟು ಬಲಪಡಿಸಬೇಕೆನ್ನುವ ಕುರಿತು ಚಿಂತನೆ ನಡೆಯುತ್ತಿದೆ ಎಂದರು.

ಈ ಸಂದರ್ಭ ಮೈಸೂರು ವಿಶ್ವವಿದ್ಯಾನಿಲಯದ  ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರು ರಾಷ್ಟ್ರೀಯ ಸೇವಾ ಯೋಜನೆಯ ಪರಿಕಲ್ಪನೆಯನ್ನು ಬದಲಿಸಿಕೊಡಬೇಕು ಎಂದು ಸಚಿವರಿಗೆ ಪ್ರಸ್ತಾವನೆಯ ಪತ್ರವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಎನ್‍ಎಸ್‍ಎಸ್ ಪ್ರಾದೇಶಿಕ ನಿರ್ದೇಶನಾಲಯ ಪ್ರಾದೇಶಿಕ ನಿರ್ದೇಶಕ ಎ.ಎನ್. ಪೂಜಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ಕಾರ್ಯದರ್ಶಿ ಡಾ. ಗಣನಾಥಶೆಟ್ಟಿ ಎಕ್ಕಾರ್, ಎನ್‍ಎಸ್‍ಎಸ್ ಇಟಿಐ ಸಂಯೋಜನಾಧಿಕಾರಿ ಡಾ. ಬಿ. ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: