ದೇಶಪ್ರಮುಖ ಸುದ್ದಿ

ಲೋಕಸಭಾ ಚುನಾವಣೆಗೆ ಮೈತ್ರಿ: 80ರಲ್ಲಿ 40 ಕ್ಷೇತ್ರಕ್ಕೆ ಮಾಯಾವತಿ ಬೇಡಿಕೆ

ಲಕ್ನೋ (ಜೂನ್ 2): ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟ ರಚನೆಯ ಬಗ್ಗೆ ಚರ್ಚೆಗಳು ದೇಶದ ರಾಜಕೀಯ ಪಕ್ಷಗಳ ನಡುವೆ ಆರಂಭವಾಗಿವೆ. ಇದರಂತೆ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಯಾವತಿ ಅವರು ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 40 ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇತ್ತಿಚೀಗಷ್ಟೇ ವಿವಿಧ ರಾಜ್ಯಗಳಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ವಿರೋಧಿ ಬಣ ಭರ್ಜರಿ ಜಯ ಸಾಧಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೋದಿ ವಿರುದ್ಧ ತೊಡೆ ತಟ್ಟಿದ್ದ ವಿರೋಧ ಪಕ್ಷಗಳ ಮೈತ್ರಿಕೂಟ, ಅದರಲ್ಲಿ ಜಯ ಸಾಧಿಸಿದೆ. ಅದರಂತೆ ಉತ್ತರಪ್ರದೇಶದಲ್ಲಿ ಎಸ್.ಪಿ ಮತ್ತು ಬಿಎಸ್‍ಪಿ ಪಕ್ಷಗಳು ಒಟ್ಟಾಗಿ ಮೋದಿ ಅವರನ್ನು ಎದುರಿಸಲು ಮೈತ್ರಿ ಮಾತುಕತೆ ನಡೆಸುತ್ತಿವೆ.

ಆದರೆ 2019 ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಷಯ ಈ ಪಕ್ಷಗಳಿಗೆ ಕಗ್ಗಂಟಾಗುವ ಸಂಭವವಿದೆ. ಕೈರಾನಾ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಬಿ.ಎಸ್.ಪಿ ಇದೀಗ ಹುಮ್ಮಸ್ಸಿನಲ್ಲಿದ್ದು, 80 ಲೋಕಸಭಾ ಕ್ಷೇತ್ರಗಳ ಪೈಕಿ 40 ರಲ್ಲಿ ಸ್ಪರ್ಧಿಸಲು ಮುಂದಾಗಿದೆ.

ಒಂದು ವೇಳೆ ಮೈತ್ರಿ ಸಾಧ್ಯವಾದರೆ ಕನಿಷ್ಠ 40 ಸೀಟುಗಳನ್ನು ತನಗೆ ಬಿಟ್ಟು ಕೊಡಬೇಕೆಂದು ಬಿ.ಎಸ್.ಪಿ ಅಧಿನಾಯಕಿ ಮಾಯಾವತಿ ಈಗಾಗಲೇ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಬಿ.ಎಸ್.ಪಿ ಬಲವಗುತ್ತಿದ್ದು, ಮೈತ್ರಿ ಬೇಕೆಂದರೆ 40 ಸೀಟುಗಳನ್ನು ಬಿಟ್ಟು ಕೊಡಬೇಕೆಂದು ಮಾಯಾವತಿ ಆಗ್ರಹಿಸಿದ್ದಾರೆ. ಮಾಯಾವತಿ ಅವರ ಈ ಬೇಡಿಕೆಯ ಕುರಿತು ಎಸ್.ಪಿ ಮತ್ತು ಕಾಂಗ್ರೆಸ್ ಪಕ್ಷಗಳು ಚಿಂತನ-ಮಂಥನ ನಡೆಸುತ್ತಿವೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: