ಮೈಸೂರು

ಸೈನಿಕರ ಪಿಂಚಣಿ ಮೊತ್ತ ವಿಸ್ತರಿಸಿ : ಸಿ.ಕೆ. ಕುರುಂಬಯ್ಯ

ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ಸೈನಿಕ ಕಲ್ಯಾಣ ಮತ್ತು ಸ್ಕ್ವಾರ್ಡ್ರನ್ ಎ.ಬಿ.ದೇವಯ್ಯ ಭವನದಲ್ಲಿ ಬುಧವಾರ ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.

ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾ ಮೇಜರ್ ಜನರಲ್ ಸಿ.ಕೆ. ಕುರುಂಬಯ್ಯ ಧ್ವಜ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ದೇಶದ ಗಡಿ ಭಾಗವನ್ನು ಹಗಲಿರುಳೆನ್ನದೇ ಸೈನಿಕರು ಕಾಯುತ್ತಿರುತ್ತಾರೆ. ಗುಂಡುಗಳಿಗೆ ಎದೆಯೊಡ್ಡುತ್ತಾರೆ.  ಅವರ ನಿವೃತ್ತಿಯ ವೇಳೆ ನೀಡುವ ಪಿಂಚಣಿ ಮೊತ್ತವನ್ನು ಅವರ ಘನತೆಗೆ ತಕ್ಕಂತೆ ವಿಸ್ತರಿಸಬೇಕು ಎಂದು ಹೇಳಿದರು. ಸೈನಿಕರು ಯುದ್ಧದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಸಂಕೇತವಾಗಿ ಸಶಸ್ತ್ರ ಪಡೆಗಳ ಧ್ವಜದಿನವನ್ನು ನಾಗರೀಕರು, ಕಾಲೇಜು ವಿದ್ಯಾರ್ಥಿಗಳು ಸೇರಿ ಆಚರಿಸಿ, ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದರು.

ಈ ಸಂದರ್ಭ ದೇಶದ ಮೂರು ಪಡೆಗಳಾದ ಭೂ ಸೇನಾ, ವಾಯುಸೇನಾ ಮತ್ತು ನೌಕಾಸೇನಾ ಪಡೆ ಪ್ರತಿಬಿಂಬಿಸುವ ಲಾಂಛನವನ್ನು ತೊಡಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಆಯುಕ್ತ ಸಿ.ಎಲ್. ಆನಂದ್, ಕ್ಯಾಪ್ಟನ್ ನರಸಿಂಹ ಶರ್ಮ, ಏರ್ ಫೋರ್ಸ್ ಸೆಲೆಕ್ಷನ್ ಬೋರ್ಡ್ ಏರ್ ಆಫೀಸರ್ ಕಮಾಂಡಿಂಗ್ ಏರ್ ಕಮೋಡೊರ್ ಕೆ.ಹೆಚ್. ಸುರೇಶ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ. ಜೆ.ಆರ್. ಬಾಲಸುಬ್ರಮಣ್ಯಂ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: