ಪ್ರಮುಖ ಸುದ್ದಿವಿದೇಶ

ಸ್ಪೇನ್‍: ಪೆಡ್ರೊ ಸಾಂಚೇಜ್‌ ನೂತನ ಪ್ರಧಾನಿ

ಮ್ಯಾಡ್ರಿಡ್ [ಸ್ಪೇನ್] ಜೂನ್ 2: ಪೆಡ್ರೊ ಸಾಂಚೇಜ್‌ ಅವರು ಸ್ಪೇನ್ ದೇಶದ ನೂತನ ಪ್ರಧಾನಿಯಾಗಿ ಪದಗ್ರಹಣ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸ್ಪೇನ್‌ನ ಪ್ರಧಾನಿಯಾಗಿದ್ದ ಮಾರಿಯಾನೊ ರಜೋಯ್‌ ಹುದ್ದೆಯಿಂದ ಕೆಳಗಿಳಿದಿದ್ದರು.

46 ವರ್ಷದ ಅನುಭವಿ ರಾಜಕಾರಣಿ ಜಾರ್ಜುವೆಲಾ ಸಾಂಚೇಜ್‌ ಅವರು ಅರಮನೆಯಲ್ಲಿ ರಾಜ ಫೆಲಿಪ್ VI ಅವರ ಸಮ್ಮುಖದಲ್ಲಿ ಪ್ರಧಾನಿಯಾಗಿ ಪ್ರಮಾಣ ಸ್ವಿಕರಿಸಿದ್ದಾರೆ. ಪ್ರಧಾನಮಂತ್ರಿ ಹುದ್ದೆಗೆ ನಿಷ್ಠೆ, ರಾಜಮನೆತಕ್ಕೆ ಭಕ್ತಿ, ನಿಷ್ಠೆ, ಸಂವಿಧಾನವನ್ನು ನಿಯಮಾನುಸಾರ ಕಾಯುವುದಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಭರವಸೆ ನಿಡುತ್ತೇನೆ ಪೆಡ್ರೊ ಸಾಂಚೇಜ್‌ ಅವರು ಹೇಳಿದ್ದಾರೆ.

ನೂತನ ಪ್ರಧಾನಿಗಳು ತಮ್ಮ ಸಚಿವ ಸಂಪುಟದ ಸದಸ್ಯರ ಹೆಸರುಗಳನ್ನು ಇನ್ನಷ್ಟೇ ಸೂಚಿಸಬೇಕಾಗಿದೆ. ಹಾಗೆಯೇ ಸಚಿವರ ಹೆಸರು ಸೂಚಿಸಿ ಮುಂದೆ ಅಧಿಕೃತ ಸರ್ಕಾರಿ ದಾಖಲೆಗಳಲ್ಲಿ ಅವರ ಹೆಸರು ಮುದ್ರಣಗೊಂಡ ಬಳಿಕ ಅವರು ಸಂಪೂರ್ಣವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇದಕ್ಕೂ ಮುನ್ನ ಸಂಸತ್ತಿನಲ್ಲಿ ವಿದಾಯ ಭಾಷಣ ಮಾಡಿದ್ದ ಮಾರಿಯಾನೊ, ಸ್ಪೇನ್‌ನ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲು ನನಗೆ ಅವಕಾಶ ನನಗೆ ದೊರೆತ ಅತಿ ದೊಡ್ಡ ಗೌರವವಾಗಿತ್ತು ಎಂದಿದ್ದಾರೆ

ಮಾರಿಯಾನೊ ರಜೋಯ್‌ ಪ್ರತಿನಿಧಿಸುವ ಕನ್ಸರ್ವೇಟಿವ್‌ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಒತ್ತಡ ಹೆಚ್ಚಾಗಿತ್ತು. (ಎನ್.ಬಿ)

Leave a Reply

comments

Related Articles

error: