ಕರ್ನಾಟಕಪ್ರಮುಖ ಸುದ್ದಿ

ಬೆಳೆಸಾಲ ಮನ್ನಾ 2018ರ ಮಾರ್ಚ್ ವರೆಗೂ ವಿಸ್ತರಿಸಲು ಕುರುಬೂರು ಶಾಂತಕುಮಾರ್ ಆಗ್ರಹ

ಬೆಂಗಳೂರು (ಜೂನ್ 2): ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಪ್ರಕಟಿಸಿರುವ ಸಾಲ ಮನ್ನಾ ಯೋಜನೆಯಲ್ಲಿ ಕೆಲವು ತಿದ್ದುಪಡಿ ಮಾಡಬೇಕಿದೆ, ಇದರಲ್ಲಿ ಪ್ರಮುಖವಾಗಿ ಸಾಲಮನ್ನಾ ಅವಧಿಯನ್ನು 2018ರ ಮಾರ್ಚ್ ವರೆಗೂ ವಿಸ್ತರಣೆ ಮಾಡುವ ಅಗತ್ಯವಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಸಾಲ ಮನ್ನಾ ಯೋಜನೆ ಸರ್ಕಾರವು ರೈತರಿಗೆ ನೀಡುವ ಭಿಕ್ಷೆಯಲ್ಲ. ಸರ್ಕಾರಗಳು ಹಿಂದಿನಿಂದಲೂ ಕೃಷಿ ಉತ್ಬನಗಳಿಗೆ ಅವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಮಾಡಿದ ಕಾರಣ ರೈತ ನಷ್ಟ ಅನುಭವಿಸಿರುವ ಹಣವನ್ನು ಈ ಮೂಲಕ ತುಂಬಿಕೂಡುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ ಎಂದು ಹೇಳಿದ್ದಾರೆ.

ಬೆಳೆ ಸಾಲ ಮನ್ನಾ ಅವಧಿಯನ್ನು ಏಪ್ರಿಲ್1, 2009ರಿಂದ ಡಿಸೆಂಬರ್ 31 2017ರವರೆಗೆ ನಿಗದಿಪಡಿಸಿರುವುದು ಹೆಚ್ಚು ರೈತರು ಸಾಲ ಮನ್ನಾ ಯೋಜನೆಗೆ ಒಳಪಡುವುದಿಲ್ಲ. ಕಬ್ಬುಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ವಿಳಂಬವಾಗಿ ಹಣ ಪಾವತಿ ಮಾಡಿದರೆ ಇದರಿಂದ ಹೆಚ್ಚು ರೈತರಿಗೆ ಸಾಲ ನವೀಕರಣವಾಗಿದೆ, ಇದು ಸಾಲ ಮನ್ನಾ ಯೋಜನೆಗೆ ಒಳಪಡುವುದಿಲ್ಲ. ಆದ್ದರಿಂದ ಏಪ್ರಿಲ್ 1 2005ರಿಂದ ಮಾರ್ಚ್ 2018ರವರೆಗೂ ಯೋಜನೆಯನ್ನು ವಿಸ್ತರಿಸಬಕು ಎಂದು ಒತ್ತಾಯಿಸಿದ್ದಾರೆ.

ರೈತರು ಭೂಮಿ ದಾಖಲೆ ಇಲ್ಲದೆ. ಚಿನ್ನಗಿರವಿ ಇಟ್ಟು ಪಹಣಿ ಪತ್ರ ನೀಡಿ ಸಾಲ ಪಡೆದಿರುವ ಸಾಲವನ್ನು ಮನ್ನಾ ಮಾಡಲೇಬೇಕು. ರೈತರು ಬೆಳೆ ಸಾಲ ಮಾಡಿ ಮರುಪಾವತಿ ಮಾಡಲು ಸಾಧ್ಯವಾಗದೆ ಕಾರಣ ನ್ಯಾಯಾಲಯಗಳಲ್ಲಿ ದಾವೆ ಹೂಡಿರುವ ಪ್ರಕರಣಗಳಿಗೂ ಸಾಲ ಮನ್ನಾ ಆಗಲೇಬೇಕು. ರಾಜ್ಯದ ರೈತರು ಬೆಳೆ ಸಾಲವನ್ನು ಬಹುರಾಷ್ಟ್ರೀಯ ಬ್ಯಾಂಕುಗಳಾದ ಎಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಗಳಿಂದಲೂ ಬೆಳೆಸಾಲ ಪಡೆದಿದ್ದಾರೆ. ಈ ಸಾಲವನ್ನು ಮನ್ನಾ ಮಾಡಬೇಕು. ಹಳ್ಳಿಯ ರೈತರು ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಸಹ ಸಾಲ ಪಡೆದಿದಾರೆ ಇಂತಹ ರೈತರಿಗೆ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಕುರುಬೂರು ಶಾಂತಕುಮಾರ್ ಅವರು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: