
ಮೈಸೂರು
“ಮೈಬಿಲ್ಡ್-16” ಕಟ್ಟಡ ಸಾಮಗ್ರಿಗಳ ವಸ್ತುಪ್ರದರ್ಶನಕ್ಕೆ ಚಾಲನೆ
500 ಮತ್ತು 1000 ರೂ. ಮುಖಬೆಲೆಯ ನೋಟುಗಳು ರದ್ದಾದ ಹಿನ್ನೆಲೆಯಲ್ಲೂ ಮೈಬಿಲ್ಡ್ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದು ಸಂತಸ ತಂದಿದೆ ಎಂದು ಮೈಸೂರು ಬಿಲ್ಡರ್ಸ್ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ. ಶ್ರೀರಾಮ ಅಭಿಪ್ರಾಯಪಟ್ಟರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ‘ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ದ ಮೈಸೂರು ಘಟಕ ಹಮ್ಮಿಕೊಂಡಿರುವ ಕಟ್ಟಡ ಸಾಮಗ್ರಿಗಳ ವಸ್ತುಪ್ರದರ್ಶನ ‘ಮೈಬಿಲ್ಡ್-16’ ಅನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಗರಿಷ್ಠ ಮುಖಬೆಲೆಯ ನೋಟು ರದ್ದತಿಯಿಂದ ಎಲ್ಲರಿಗೂ ಕಷ್ಟವಾಗಿದೆ. ಇದಕ್ಕೆ ಬಿಲ್ಡರ್ ಕೂಡ ಹೊರತಾಗಿಲ್ಲ. ಆದರೆ, ಈ ತೊಂದರೆ ತಾತ್ಕಾಲಿಕವಾಗಿದ್ದು, ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಆರ್ಬಿಐ ಹೇಳುವುದನ್ನು ನೋಡಿದರೆ ಹೊಸ ವರ್ಷದಿಂದ ಎಲ್ಲ ವರ್ಗದ ಜನರಿಗೂ ಸಾಕಷ್ಟು ಅನುಕೂಲಗಳು ಆಗುವ ಆಶಾಭಾವನೆ ಮೂಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮೈಬಿಲ್ಡ್-16 ಅಧ್ಯಕ್ಷ ಸಿ.ಡಿ.ಕೃಷ್ಣ, ಗೌರವ ಕಾರ್ಯದರ್ಶಿ ಕೆ.ಎಂ. ರಘುನಾಥ, ಮೈಸೂರು ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್. ಸುಬ್ರಹ್ಮಣ್ಯ, ಗೌರವ ಕಾರ್ಯದರ್ಶಿ ಬಿ.ಎಸ್. ದಿನೇಶ್ ಇದ್ದರು.