
ಮೈಸೂರು
ಯೋಗ ದಿನ ಪ್ರಯುಕ್ತ ಅರಮನೆಯ ಮುಂಭಾಗ ಯೋಗಾಭ್ಯಾಸ
ಮೈಸೂರು,ಜೂ.3:- ಜೂನ್ 21 ರ ವಿಶ್ವ ಯೋಗ ದಿನ ಹಿನ್ನೆಲೆ ಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಪೂರ್ವ ತಯಾರಿ ನಡೆಸುತ್ತಿದ್ದು, ಇಂದು ಮುಂಜಾನೆ ಯೋಗಪಟು ಗಳು ಅರಮನೆಯ ಮುಂಭಾಗ ಯೋಗಾಭ್ಯಾಸ ನಡೆಸಿದರು.
ಇಂದು ಮುಂಜಾನೆ 5.30 ರಿಂದಲೇ ಯೋಗಪಟುಗಳು ಯೋಗಾಭ್ಯಾಸದಲ್ಲಿ ತೊಡಗಿ ಯೋಗ ಮಾಡಿದರು. ಕಳೆದ ವರ್ಷ ವಿಶ್ವ ಯೋಗ ದಿನದಂದು ಮೈಸೂರಿನಲ್ಲಿ 55 ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಯೋಗ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಲಾಗಿತ್ತು ,ಅಂದು ವಿಶ್ವ ಯೋಗ ದಿನದಂದು ಪ್ರಧಾನಿ ಮೋದಿ ಮೈಸೂರಿಗೆ ಆಗಮಿಸುತ್ತಾರೆ ಎನ್ನಲಾಗಿತ್ತು. ಆದರೆ ಕೆಲ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಜೂನ್ 21 ರ ವಿಶ್ವ ಯೋಗ ದಿನ ಯೋಗ ಪ್ರದರ್ಶಿಸಿ ದಾಖಲೆ ನಿರ್ಮಿಸಲು ಮಲ್ಲಿಗೆ ನಗರಿ ಮೈಸೂರು ಸಜ್ಜಾಗುತ್ತಿದ್ದು, ಇಂದು ಮುಂಜಾನೆ ಯೋಗ ಪಟು ಗಳು ಅರಮನೆಯ ಮುಂಭಾಗ ಯೋಗಾಭ್ಯಾಸ ನಡೆಸಿದರು.ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ,ನಡೆದ ಯೋಗ ತಾಲೀಮಿನಲ್ಲಿ ಎಸ್ ಪಿವೈ ಎಸ್ ಎಸ್, ಜಿಎಸ್ ಎಸ್ ಯೋಗಿಕ್ ಫೌಂಡೇಶನ್, ಪತಂಜಲಿ ಸಂಸ್ಥೆ, ಮೈಸೂರು ಯೋಗ ಒಕ್ಕೂಟ, ಮೈಸೂರು ಯೋಗ ಸ್ಪೋರ್ಟ್ ಫೌಂಡೇಶನ್ ಸಂಸ್ಥೆಯ ನೂರಕ್ಕೂ ಅಧಿಕ ಯೋಗಪಟುಗಳು ಪಾಲ್ಗೊಂಡಿದ್ದರು. (ಕೆ.ಎಸ್.ಎಸ್.ಎಚ್)