ಮೈಸೂರು

ಅಶ್ಲೀಲ ಚಿತ್ರ ವೀಕ್ಷಣೆಯಿಂದ ಪಕ್ಷಕ್ಕೆ ಮುಜುಗರವಾಗಿದೆ: ತನ್ವೀರ್ ಸೇಠ್

ಅಶ್ಲೀಲ ಚಿತ್ರ ವೀಕ್ಷಣೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಿರುವುದು ನಿಜ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರವಯುತವಾಗಿ ರಾಜಕೀಯ ಜೀವನ ನಡೆಸಿಕೊಂಡು ಬಂದ ಕುಟುಂಬ ನಮ್ಮದು. ಈ ಪ್ರಕರಣದಿಂದ ನನ್ನ ಗೌರವಕ್ಕೂ ಚ್ಯುತಿ ಉಂಟಾಗಿದೆ. ಅದೊಂದು ಕೆಟ್ಟ ಗಳಿಗೆಯಲ್ಲಿ ನಡೆದು ಹೋದ ಸಂಗತಿ ಎಂದರು.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಜಗಳ ನಡೆಯಿತು ಎಂಬ ವಿಷಯ ಗೊತ್ತಾಗಿತ್ತು. ವಾಟ್ಸ್ ಆ್ಯಪ್‍ನಲ್ಲಿ ಈ ಕುರಿತು ಸಂದೇಶ ಬರಬಹುದೆಂದು ನೋಡುತ್ತಿದ್ದೆ. ಆಗ ಬೇರೆ ಗ್ರೂಪಿನಲ್ಲಿ ಹಲವು ಸಂದೇಶಗಳ ಮಧ್ಯೆ ಕೆಲ ಯುವತಿಯರ ಚಿತ್ರಗಳಿದ್ದವು. ಅವುಗಳನ್ನು ಡೌನ್‍ಲೋಡ್ ಮಾಡೇ ಇಲ್ಲ. ಸ್ಕ್ರಾಲ್ ಮಾಡುತ್ತಿದ್ದೆ ಅಷ್ಟೇ ಎಂದು ಹೇಳಿದರು.

ಈ ಬಗ್ಗೆ ಸೈಬರ್ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದೇನೆ. ಮೊಬೈಲನ್ನೂ ಅವರ ವಶಕ್ಕೆ ನೀಡಿದ್ದೇನೆ. ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆಯಲಿದ್ದಾರೆ ಎಂದರು.

Leave a Reply

comments

Related Articles

error: